ಪಿಡಬ್ಲುಡಿ ವಸತಿಗೃಹದಲ್ಲಿ ಕಳವು
ಉಡುಪಿ, ಫೆ.23: ಅಜ್ಜರಕಾಡುವಿನಲ್ಲಿರುವ ಉಡುಪಿ ಲೋಕೋಪಯೋಗಿ ಇಲಾಖೆಯ ವಸತಿ ಗೃಹವೊಂದಕ್ಕೆ ಫೆ.22ರಂದು ರಾತ್ರಿ ವೇಳೆ ನುಗ್ಗಿದ ಕಳ್ಳರು ಸಾವಿರಾರು ರೂ. ಮೌಲ್ಯದ ಸೊತ್ತುಗಳನ್ನು ಕಳವು ಮಾಡಿರುವ ಬಗ್ಗೆ ವರದಿ ಯಾಗಿದೆ.
ಅಶೋಕ್ ಎಸ್.ಕೆ.(58) ಎಂಬವರ ವಸತಿ ಗೃಹಕ್ಕೆ ನುಗ್ಗಿದ ಕಳ್ಳರು, ಲ್ಯಾಪ್ಟಾಪ್, ಎರಡು ವಾಚ್ಗಳು ಕಳವು ಮಾಡಿರುವುದಾಗಿ ದೂರಲಾಗಿದೆ. ಇವುಗಳ ಒಟ್ಟು ಮೌಲ್ಯ 24,000 ರೂ. ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story