ಕುಕ್ಕಾಜೆ: ರಕ್ತದಾನ ಶಿಬಿರ
ಕುಕ್ಕಾಜೆ, ಫೆ.24: ಫ್ಯೂಚರ್ ಕ್ರಿಯೇಟರ್ಸ್ ಚಾರೀಟೇಬಲ್ ಟ್ರಸ್ಟ್ ಅಸೋಸಿಯೇಶನ್ (ರಿ) ಶೈನ್ಗೈಸ್ ಕುಕ್ಕಾಜೆ ಹಾಗೂ ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ (ರಿ) ಸಂಸ್ಥೆಯ ಜಂಟಿ ಆಶ್ರಯದಲ್ಲಿ ವೆನ್ಲಾಕ್ ಜಿಲ್ಲಾ ಆಸ್ಪತ್ರೆಯ ಸಹಭಾಗಿತ್ವದಲ್ಲಿ ಸಾರ್ವಜನಿಕ ರಕ್ತದಾನ ಶಿಬಿರವು ರವಿವಾರ ಮಂಚಿ ಗ್ರಾಪಂ ವಠಾರದಲ್ಲಿ ನಡೆಯಿತು.
ಗಫ್ಫಾರ್ ಸಾಗರ್ ಅಧ್ಯಕ್ಷತೆ ವಹಿಸಿದ್ದ ಕಾರ್ಯಕ್ರವನ್ನು ಹುಸೈನ್ ಬಾಅಲವಿ ತಂಙಳ್ ಕುಕ್ಕಾಜೆ ಉದ್ಘಾಟಿಸಿದರು. ಪದ್ಮಶ್ರೀ ಪುರಸ್ಕೃತ ಅಕ್ಷರ ಸಂತ ಹಾಜಬ್ಬ ಹರೇಕಳ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಎಂಎಸ್ ಮುಹಮ್ಮದ್, ಹನೀಫ್ ಹಾಜಿ ಕಲ್ಲಡ್ಕ, ರೆ.ಫಾ.ಹೆನ್ರಿ ಡಿಸೋಜ, ಇಸ್ಮಾಯೀಲ್ ಕೆಎಆರ್, ಮೋಹನ್ದಾಸ್, ಅಶ್ರಫ್ ಕಲ್ಕಟ್ಟ, ಅಬ್ದುಲ್ ಕರೀಂ, ಕೆಎಂ ಶರೀಫ್, ಹಸೈನಾರ್, ಆಶಿಕ್ ಕುಕ್ಕಾಜೆ, ರಫೀಕ್, ನಝೀರ್ ಉಪಸ್ಥಿತರಿದ್ದರು.
Next Story