ರಸ್ತೆಯಲ್ಲಿ ಬಿಸಾಕಿದ ಕರಪತ್ರಗಳು : ಸಂಸ್ಥೆಗೆ ಮನಪಾದಿಂದ ದಂಡ
ಮಂಗಳೂರು, ಫೆ. 24: ಖಾಸಗಿ ಸಂಸ್ಥೆಯೊಂದರ ಶುಭಾರಂಭಕ್ಕೆ ಸಂಬಂಧಿಸಿದ ಭಿತ್ತಿಪತ್ರಗಳು ನಗರದ ರಸ್ತೆಯಲ್ಲಿ ಬಿಸಾಕಿದ ಸ್ಥಿತಿಯಲ್ಲಿದ್ದ ಕುರಿತು ಸಾರ್ವಜನಿಕರು ನೀಡಿದ ದೂರಿನ ಹಿನ್ನೆಲೆಯಲ್ಲಿ ಮಂಗಳೂರು ಮಹಾನಗರ ಪಾಲಿಕೆ ವತಿಯಿಂದ ಸಂಸ್ಥೆಯ 10,000 ರೂ. ದಂಡ ವಿಧಿಸಲಾಗಿದೆ.
ಕಂಕನಾಡಿಯ ಮ್ಯಾಕ್ ಮಾಲ್ನ ಕ್ರೋಮಾ ಎಂಬ ಸಂಸ್ಥೆಯ ಶುಭಾರಂಭದ ಕರಪತ್ರಗಳು ಬಿಜೈ ರೋಡ್ ಹಾಗೂ ಫುಟ್ಪಾತ್ಗಳಲ್ಲಿ ಚೆಲ್ಲಾಪಿಲ್ಲಿಯಾಗಿ ಬಿಸಾಡಲಾಗಿತ್ತು. ಇದನ್ನು ವಾಟ್ಸ್ಆ್ಯಪ್ ಸಂದೇಶಗಳ ಮೂಲಕ ಸಾರ್ವಜನಿಕರು ಕ್ರಮ ಕೈಗೊಳ್ಳುವಂತೆ ಮಹಾನಗರ ಪಾಲಿಕೆಯನ್ನು ಒತ್ತಾಯಿಸಿದ್ದರು. ಪಾಲಿಕೆ ದಂಡ ವಿಧಿಸಿದೆ.
Next Story