ಅಬ್ಬಕ್ಕ ಕೀಡೋತ್ಸವದ ಫಲಿತಾಂಶ ಪ್ರಕಟ
ಮಂಗಳೂರು, ಫೆ.25: ಅಸೈಗೋಳಿಯ ಕೇಂದ್ರ ಮೈದಾನದಲ್ಲಿ ರವಿವಾರ ನಡೆದ ವೀರ ರಾಣಿ ಅಬ್ಬಕ್ಕ ಕ್ರೀಡೋತ್ಸವದ ಫಲಿತಾಂಶ ಪ್ರಕಟಗೊಂಡಿದೆ.
ಮಹಿಳೆಯರ ತೋಬಾಲ್ನಲ್ಲಿ ಮಂಗಳೂರು ಯುರೋಪಿಯನ್ ಮೋಟರ್ಸ್ (ಪ್ರಥಮ), ಸುರತ್ಕಲ್ ಫ್ರೆಂಡ್ಸ್ (ದ್ವಿತೀಯ), ಮಂಗಳೂರು ಸಂತ ಆಗ್ನೆಸ್ ಕಾಲೇಜು (ತೃತೀಯ), ಪೆರ್ಮನ್ನೂರು ಸರಕಾರಿ ಪ್ರೌಢಶಾಲೆ (ನಾಲ್ಕನೇ) ಸ್ಥಾನ ಪಡೆದುಕೊಂಡಿದೆ.
ಮಹಿಳೆಯರ ಹಗ್ಗಜಗ್ಗಾಟದಲ್ಲಿ ಬಂಟರ ಸಂಘ ಉಳ್ಳಾಲ ವಲಯ (ಪ್ರಥಮ), ರಂಜನಿ ಕ್ಲಬ್ (ದ್ವಿತೀಯ), ಮಂಗಳೂರು ಮುನೀಶ್ವರ ಮಹಾಗಣಪತಿ (ತೃತೀಯ), ಮಂಗಳೂರು ವೆಸ್ ಆರ್ಯನ್ (ನಾಲ್ಕನೇ) ಸ್ಥಾನ ಪಡೆದುಕೊಂಡಿದೆ.
ಪುರುಷರ ವಾಲಿಬಾಲ್ ವಿಭಾಗದಲ್ಲಿ ಮಂಗಳೂರು ಸ್ಟೇಡಿಯಂ ಫ್ರೆಂಡ್ಸ್ (ಪ್ರಥಮ), ಅಸೈಗೋಳಿ ಹುನುಮಾನ್ ಫ್ರೆಂಡ್ಸ್ (ದ್ವಿತೀಯ), ಅಸೈಗೋಳಿ ಹುನುಮಾನ್ ಫ್ರೆಂಡ್ಸ್ (ತೃತೀಯ), ಕೈರಂಗಳ ಎಸ್ಕೆಜಿಇ (ನಾಲ್ಕನೇ) ಪಡೆದುಕೊಂಡಿದೆ.
ಪುರುಷರ ಹಗ್ಗಜಗ್ಗಾಟದಲ್ಲಿ ತೊಕ್ಕೊಟ್ಟು ಶಕ್ತಿಭಾರತ್ (ಪ್ರಥಮ), ಆಂಜನೇಯ ಫ್ರೆಂಡ್ಸ್ ಕ್ಲಬ್ (ದ್ವಿತೀಯ), ಫ್ರೆಂಡ್ಸ್ ಮೊಗರ್ನಾಡು (ತೃತೀಯ), ಫ್ರೆಂಡ್ಸ್ ಹೊಸಂಗಡಿ (ನಾಲ್ಕನೇ) ಪಡೆದುಕೊಂಡಿದೆ.