ಬ್ಲೂ ಡಾರ್ಟ್ ಶಾಪ್ನಲ್ಲಿ ಕಳವು
ಮಣಿಪಾಲ, ಫೆ.25: ಲಕ್ಷ್ಮಿಂದ್ರನಗರದಲ್ಲಿರುವ ಬ್ಲೂ ಡಾರ್ಟ್ ಲೊಜಿಸ್ಟಿಕ್ಗೆ ಫೆ.23ರ ಮಧ್ಯಾಹ್ನದಿಂದ 24ರ ಬೆಳಗಿನ ಮಧ್ಯಾವಧಿ ಯಲ್ಲಿ ನುಗ್ಗಿದ ಕಳ್ಳರು ಲಕ್ಷಾಂತರ ರೂ. ನಗದು ಕಳವು ಮಾಡಿರುವ ಬಗ್ಗೆ ವರದಿಯಾಗಿದೆ.
ಯಾರೋ ಸಿಬ್ಬಂದಿಯವರು ಕಚೇರಿಯ ಒಳಗೆ ಹೋಗಿ ಕ್ಯಾಶ್ರೂಮ್ನ ಡೋರನ್ನು ಕಬ್ಬಿಣದ ಕಟ್ಟರ್ನಿಂದ ತುಂಡು ಮಾಡಿ, ಒಳಗೆ ಹೋಗಿ ಕೀ ಬಳಸಿ ಕ್ಯಾಶ್ಬಾಕ್ಸ್ ಒಪನ್ ಮಾಡಿ ಅದರಲ್ಲಿಟ್ಟಿದ್ದ 2 ಲಕ್ಷ ರೂ. ಹಣವನ್ನು ಕಳವು ಮಾಡಿರುವುದಾಗಿ ದೂರಲಾಗಿದೆ.
ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.
Next Story