ಫೆ.26, 27: ನಿಬ್ರಾಸುಲ್ ಹುದಾ ಅಸೋಸಿಯೇಶನ್ ವತಿಯಿಂದ 2 ದಿನಗಳ ಧಾರ್ಮಿಕ ಕಾರ್ಯಕ್ರಮ
ಬೆಳ್ತಂಗಡಿ, ಫೆ.25: ನಿಬ್ರಾಸುಲ್ ಹುದಾ ಅಸೋಸಿಯೇಶನ್ ಅಳಕೆ ಇದರ ವತಿಯಿಂದ ಫೆಬ್ರವರಿ 26, 27 ರಂದು ಎರಡು ದಿನಗಳ ಧಾರ್ಮಿಕ ಕಾರ್ಯಕ್ರಮಗಳು ಶೈಖುನಾ ಪಿ.ಕೆ ಮುಹಮ್ಮದ್ ಮದನಿ ಉಸ್ತಾದರ ಅಳಕೆಯ ಮನೆಯಲ್ಲಿ ನಡೆಯಲಿದೆ.
ಫೆ.26 ರಂದು ಬುಧವಾರ ರಾತ್ರಿ ಇಶಾ ನಮಾಝ್ ಬಳಿಕ ಖುತುಬಿಯತ್ ನಡೆಯಲಿದ್ದು, ಫೆ.27 ರಂದು ಗುರುವಾರ ಸುಬುಹಿ ನಮಾಝಿನ ಬಳಿಕ ಖತ್ಮುಲ್ ಕುರ್ ಆನ್, 10 ಗಂಟೆಗೆ ಅಜ್ಮೀರ್ ಮೌಲಿದ್, 10:30 ಗಂಟೆಗೆ ಓಲ್ಡ್ ಸ್ಟೂಡೆಂಟ್ ಮೀಟ್, 11 ಗಂಟೆಗೆ ಖಿಲ್ರ್ ಮೌಲಿದ್, 11:30ಕ್ಕೆ ಜಲಾಲಿಯ್ಯಾ ರಾತಿಬ್, 12:30 ಕ್ಕೆ ಸನ್ಮಾನ ಕಾರ್ಯಕ್ರಮ ಹಾಗೂ ಬಳಿಕ ಸಮಾರೋಪ ಸಮಾರಂಭ ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ.
Next Story