ಮಂಗಳೂರು: ಕೆಲವೇ ನಿಮಿಷಗಳ ಅಂತರದಲ್ಲಿ ತಾಯಿ-ಮಗ ಮೃತ್ಯು
ಮಂಗಳೂರು, ಫೆ.25: ತಾಯಿ ಮತ್ತು ಮಗ ಕೆಲವೇ ನಿಮಿಷಗಳ ಅಂತರದಲ್ಲಿ ಮೃತಪಟ್ಟ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ನಗರದ ಕಾಪ್ರಿಗುಡ್ಡ ನಿವಾಸಿಯಾಗಿದ್ದ ದಿ.ಬಾಜಿಲ್ ಡಿಸೋಜಾರ ಪತ್ನಿ ಜೂಲಿಯಾನ ಡಿಸೋಜ (84) ಮತ್ತವರ ಮಗ ನೋಬರ್ಟ್ ಡಿಸೋಜ (58) ಮೃತಪಟ್ಟವರು.
ಕೆಲವು ತಿಂಗಳ ಹಿಂದೆ ನಾರ್ಬರ್ಟ್ ಡಿಸೋಜ ಬಿದ್ದು ತಲೆಗೆ ಗಂಭೀರ ಗಾಯಗೊಂಡಿದ್ದರು. ಹಾಗೆ ಅವರನ್ನು ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಎರಡು ವಾರದ ಹಿಂದೆ ಅವರ ತಲೆಗೆ ಶಸ್ತ್ರಚಿಕಿತ್ಸೆಯೂ ಅಗಿದ್ದು, ಅದರಿಂದ ಅವರು ಚೇತರಿಸಿಕೊಳ್ಳಲಾಗದೆ ಕೋಮಾ ಸ್ಥಿತಿಗೆ ತಲುಪಿದ್ದರು.
ತನ್ನ ಮಗ ಕೋಮಾ ಸ್ಥಿತಿಯಲ್ಲಿದ್ದಾನೆ ಎಂಬ ಸುದ್ದಿ ತಿಳಿದ ತಾಯಿಯು ಆಘಾತಕ್ಕೀಡಾಗಿ ರವಿವಾರ ಕೊನೆಯುಸಿರೆಳೆದರು. ತಾಯಿ ಮೃತಪಟ್ಟ ಕೆಲವೇ ನಿಮಿಷಗಳ ಬಳಿಕ ಮಗ ಕೂಡ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
Next Story