ಫೆ.27; ಮಂಗಳೂರು ವಿ.ವಿ.ಘಟಿಕೋತ್ಸವ ;5,575 ಮಂದಿಗೆ ಪದವಿ ಪ್ರದಾನ
ಮಂಗಳೂರು, ಫೆ.26:ಮಂಗಳೂರು ವಿಶ್ವ ವಿದ್ಯಾನಿಲಯದ ಮಂಗಳ ಸಭಾಂಗಣದಲ್ಲಿ ಫೆ.27ರಂದು ಸಂಜೆ 3 ಗಂಟೆಗೆ ನಡೆಯಲಿರುವ 38ನೆ ಘಟಿಕೋತ್ಸವದಲ್ಲಿ ಈ ಬಾರಿ 5,575 ಮಂದಿ ಪದವಿ ಪ್ರದಾನ ಮಾಡಲಾಗುವುದು ಎಂದು ವಿಶ್ವ ವಿದ್ಯಾನಿಲಯದ ಕುಲಪತಿ ಪಿ.ಎಸ್.ಎಡಪಡಿತ್ತಾಯ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.
ಈ ಸಮಾರಂಭದಲ್ಲಿ ಇಬ್ಬರಿಗೆ ಡಿ.ಲಿಟ್,105 ಮಂದಿಗೆ ಪಿಎಚ್ಡಿ,1916 ಸ್ನಾತ ಕೋತ್ತರ ಪದವಿ ಹಾಗೂ 4552 ಮಂದಿಗೆ ಪದವಿ ಪ್ರದಾನ ಮಾಡಲಾಗುವುದು.ಇದೇ ಸಂದರ್ಭದಲ್ಲಿ 34 ಚಿನ್ನದ ಪದಕ,120 ನಗದು ಬಹುಮಾನ ವಿತರಿಸಲಾಗುವುದು ಎಂದು ಪಿ.ಎಸ್.ಎಡಪಡಿತ್ತಾಯ ತಿಳಿಸಿದ್ದಾರೆ.
Next Story