ಪೇಜಾವರ ಪೇರದಲ್ಲಿ ಉರೂಸ್ ಕಾರ್ಯಕ್ರಮ
ಮಂಗಳೂರು, ಫೆ.27: ಪೇಜಾವರ ಸಮೀಪದ ಪೇರ ಮುಹಿಯ್ಯುದ್ದೀನ್ ಜುಮಾ ಮಸ್ಜಿದ್ ಮುಂಭಾಗದಲ್ಲಿರುವ ಪೇರ ಹಝ್ರತ್ ಶೈಖ್ ಹಾಜಿ ವಲಿಯುಲ್ಲಾಹಿ ಅವರ 14ನೆ ಉರೂಸ್ ಕಾರ್ಯಕ್ರಮವು ಫೆ.29ರಂದು ರಾತ್ರಿ 8:30ಕ್ಕೆ ನಿವೃತ್ತ ಪ್ರಾಂಶುಪಾಲ ಪ್ರೊ. ಇಬ್ರಾಹೀಂ ಬ್ಯಾರಿಯ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಅಸೈಯ್ಯದ್ ಮುಹ್ಸಿನ್ ಸೈದಲವಿ ದುಆಗೈಯುವರು. ಅಬ್ದುಲ್ ಅಝೀಝ್ ದಾರಿಮಿ ದಿಕ್ಸೂಚಿ ಭಾಷಣ ಮಾಡುವರು. ಅಸ್ಗರ್ ಫೈಝಿ ಉದ್ಘಾಟಿಸುವರು.
ಉರೂಸ್ ಪ್ರಯುಕ್ತ ಫೆ.28ರಂದು ಜುಮಾ ನಮಾಝ್ನ ಬಳಿಕ ಕೆಬಿ ಅಬ್ಬಾಸ್ ಸಅದಿ ಪೆರ್ನೆ ಅವರ ನೇತೃತ್ವದಲ್ಲಿ ‘ಖತಮುಲ್ ಕುರ್ಆನ್’ ನಡೆಯಲಿದೆ. ರಾತ್ರಿ 8:30ಕ್ಕೆ ಅಸೈಯದ್ ಝೈನುಲ್ ಆಬಿದೀನ್ ಜಮಲುಲ್ಲೈಲ್ ತಂಙಳ್ ಕಾಜೂರು ನೇತೃತ್ವದಲ್ಲಿ ಸ್ವಲಾತ್ ವಾರ್ಷಿಕ ಜರುಗಲಿದೆ ಎಂದು ಪ್ರಕಟನೆ ತಿಳಿಸಿದೆ.
Next Story