ಕಣಚೂರು ಆಸ್ಪತ್ರೆಯಿಂದ ಮಾ.1ರಂದು ನೆಲ್ಯಾಡಿಯಲ್ಲಿ ಉಚಿತ ವೈದ್ಯಕೀಯ ಶಿಬಿರ
ಕೊಣಾಜೆ, ಫೆ.28: ದೇರಳಕಟ್ಟೆ ನಾಟೆಕಲ್ ನ ಕಣಚೂರು ವೈದ್ಯಕೀಯ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ವತಿಯಿಂದ ನೆಲ್ಯಾಡಿಯ ಬೆಥನಿ ವಿದ್ಯಾಲಯ ಹಾಗೂ ನೆಲ್ಯಾಡಿ ಸಮಾನ ಮನಸ್ಕರ ವೇದಿಕೆಯ ಸಹಯೋಗದೊಂದಿಗೆ ಒಂದು ದಿನದ ಉಚಿತ ವೈದ್ಯಕೀಯ ಶಿಬಿರವು ಮಾ.1ರಂದು ನೆಲ್ಯಾಡಿ ಬೆಥನಿ ವಿದ್ಯಾಲಯದಲ್ಲಿ ನಡೆಯಲಿದೆ.
ಶಿಬಿರದಲ್ಲಿ ವೈದ್ಯಕೀಯ ಶಾಸ್ತ್ರ ತಜ್ಞರು, ಮೂಳೆ ತಜ್ಞರು, ಶಸ್ತ್ರಚಿಕಿತ್ಸೆ ತಜ್ಞರು, ಸ್ತ್ರೀ ರೋಗ ಮತ್ತು ಪ್ರಸೂತಿ ತಜ್ಞರು, ಕಿವಿ ಮೂಗು ಮತ್ತು ಗಂಟಲು ತಜ್ಞರು, ಮಕ್ಕಳ ತಜ್ಞರು, ನೇತ್ರ ತಜ್ಞರು ಭಾಗವಹಿಸಲಿದ್ದು ಉಚಿತ ಔಷದಿಗಳು, ಉಚಿತ ರಕ್ತ ತಪಾಸಣೆ ಕೂಡಾ ನಡೆಯಲಿದೆ
ಉಚಿತ ವೈದ್ಯಕೀಯ ಶಿಬಿರದಲ್ಲಿ ಕಣಚೂರು ಕ್ಯಾಂಪ್ ಕಾರ್ಡ್ ನೀಡಲಾಗುವುದು ಹಾಗೂ ಕಣಚೂರು ಆರೋಗ್ಯ ಕಾರ್ಡ್ ಗೆ ಅರ್ಜಿ ನೀಡಲಾಗುವುದು. ಹೆಚ್ಚಿನ ಮಾಹಿತಿಗಾಗಿ 8970194288, 9481917806 ನಂಬರನ್ನು ಸಂಪರ್ಕಿಸಬಹುದು ಎಂದು ಪ್ರಕಟನೆ ತಿಳಿಸಿದೆ.
Next Story