ಹಿರಿಯಡಕ: ಬೆಂಕಿ ಆಕಸ್ಮಿಕ ; ಹಳೆಯ ಕಾರು, ಆಟೋಗಳು ಭಸ್ಮ
ಹಿರಿಯಡಕ: ಇಲ್ಲಿನ ಆತ್ರಾಡಿ ಸಮೀಪದ ಬೈರಂಜೆ ಎಂಬಲ್ಲಿ ಶುಕ್ರವಾರ ಮಧ್ಯಾಹ್ನ ಬೋಳುಗುಡ್ಡೆಯಲ್ಲಿ ಬೆಂಕಿ ಹರಡಿ, ಹಳೆಯ 1 ಕಾರು ಮತ್ತು 3 ಆಟೋ ರಿಕ್ಷಾಗಳು ಸುಟ್ಟು ಭಸ್ಮವಾಗಿದೆ. ಸ್ಥಳಕ್ಕೆ ಧಾವಿಸಿದ ಅಗ್ನಿ ಶಾಮಕ ಸಿಬ್ಬಂದಿ ಬೆಂಕಿಯನ್ನು ಹತೋಟಿಗೆ ತಂದು ಹೆಚ್ಚಿನ ಹಾನಿಯನ್ನು ತಪ್ಪಿಸಿದ್ದಾರೆ.
ಆತ್ರಾಡಿ - ಬಜ್ಪೆ ರಾಜ್ಯ ಹೆದ್ದಾರಿಯ ಪಕ್ಕದ ಈ ಗುಡ್ಡೆಯಲ್ಲಿ ಒಣಗಿದ್ದ ಹುಲ್ಲಿಗೆ ಕಿಡಿಗೇಡಿಗಳು ಬೆಂಕಿ ಹಾಕಿದ್ದು, ಗಾಳಿಯ ಬಿರುಸಿಗೆ ಅದು ಗುಡ್ಡೆಯಿಡಿ ಹರಡಿದೆ. ಅಲ್ಲಿಯೇ ಮನೆಯೊಂದರ ಹೊರಗೆ ಸ್ಕ್ರಾಪ್ ಮಾಡಲೆಂದು ತಂದ 1 ಕಾರು ಮತ್ತು 3 ಆಟೋಗಳನ್ನು ನಿಲ್ಲಿಸಲಾಗಿತ್ತು. ಅವುಗಳಿಗೆ ಬೆಂಕಿ ತಗಲಿ ಸಂಪೂರ್ಣ ಸುಟ್ಟು ಹೋಗಿದೆ. ಮನೆಗೆ ಬೆಂಕಿ ಹತ್ತದಂತೆ ಅಗ್ನಿಶಾಮಕ ದಳದವರು ರಕ್ಷಿಸಿದ್ದಾರೆ.
Next Story