ಬೆಂಕಿ ಅಕಸ್ಮಿಕ: ಗಾಯಾಳು ಮಹಿಳೆ ಮೃತ್ಯು
ಕೋಟ, ಮಾ.16: ಬೆಂಕಿ ಅಕಸ್ಮಿಕದಿಂದ ಗಂಭೀರವಾಗಿ ಗಾಯಗೊಂಡಿದ್ದ ಶಾಲೆಯ ಅಡುಗೆ ಸಹಾಯಕಿಯೊಬ್ಬರು ಮೃತಪಟ್ಟ ಘಟನೆ ಮೊಳಹಳ್ಳಿಯ ಬೆಂಕನೂರು ಕೋಣೆ ಎಂಬಲ್ಲಿ ನಡೆದಿದೆ.
ಮೃತರನ್ನು ಕೋಣೆಯ ಬೇಬಿ(38) ಎಂದು ಗುರುತಿಸಲಾಗಿದೆ. ಬಿದ್ಕಲ್ ಕಟ್ಟೆಯ ಪ್ರಾಥಮಿಕ ಶಾಲೆಯ ಅಡುಗೆ ಸಹಾಯಕಿ ಯಾಗಿರುವ ಇವರು, ಮಾ.10ರಂದು ಸಂಜೆ ವೇಳೆ ಮನೆಯ ಹೊರಗೆ ಓಲೆಯಲ್ಲಿ ಬೆಂಕಿ ಹಚ್ಚುವಾಗ, ಬೆಂಕಿ ಸೀರೆಗೆ ತಾಗಿ ಗಂಭೀರವಾಗಿ ಗಾಯಗೊಂಡಿದ್ದಾರೆನ್ನಲಾಗಿದೆ.
ಮಣಿಪಾಲ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಇವರು, ಮಾ.15ರಂದು ಸಂಜೆ ವೇಳೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story