ಕಾಸರಗೋಡು: ‘ಕೊರೋನ’ಗೆ ಔಷಧಿ ಹೆಸರಿನಲ್ಲಿ ವಂಚಿಸುತ್ತಿದ್ದ ನಕಲಿ ವೈದ್ಯನ ಬಂಧನ
ಕಾಸರಗೋಡು, ಮಾ.22: ಕೊರೋನ ಸೋಂಕಿಗೆ ಔಷಧಿ ಎಂದು ನಂಬಿಸಿ ದ್ರವರೂಪದ ವಸ್ತುವನ್ನು ಮಾರಾಟ ಮಾಡುತ್ತಿದ್ದ ನಕಲಿ ವೈದ್ಯ ನೋರ್ವನನ್ನು ಕಾಸರಗೋಡು ಪೊಲೀಸರು ಬಂಧಿಸಿದ್ದಾರೆ.
ವಿದ್ಯಾನಗರ ಚಾಲ ನಿವಾಸಿ ಹಂಝ ಬಂಧಿತ ಆರೋಪಿ.
ಕೊರೋನ ಔಷಧಿ ಎಂದು ಬಾಟಲಿಗಳಲ್ಲಿ ಯಾವುದೋ ರೀತಿಯ ದ್ರವ ಪದಾರ್ಥವನ್ನು ತುಂಬಿಸಿ ಈತ ಮಾರಾಟ ಮಾಡುತ್ತಿದ್ದನೆನ್ನಲಾಗಿದೆ. ಈ ಬಗ್ಗೆ ಮಾಹಿತಿ ಲಭಿಸಿ ಪೊಲೀಸರು ದಾಳಿ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ. ಅಲ್ಲದೆ ನೂರಾರು ಬಾಟಲಿ ದ್ರವ ವಸ್ತುವನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
Next Story