ಕಾಞಂಗಾಡ್: ಎಸೆಸೆಲ್ಸಿ ವಿದ್ಯಾರ್ಥಿಯಲ್ಲಿ ಕೊರೋನ ದೃಢ
ಈತನ ಜೊತೆ ಪರೀಕ್ಷೆ ಬರೆದ ವಿದ್ಯಾರ್ಥಿಗಳ ಮನೆಗಳಲ್ಲಿ ನಿಗಾ
ಕಾಸರಗೋಡು, ಮಾ.28: ಕಾಸರಗೋಡಿನಲ್ಲಿ ಎಸೆಸೆಲ್ಸಿ ವಿದ್ಯಾರ್ಥಿಯೋರ್ವನಲ್ಲಿ ಕೊರೋನ ಸೋಂಕು ದೃಢಪಟ್ಟಿರುವುದು ಆತಂಕಕ್ಕೆ ಕಾರಣವಾಗಿದೆ. ಶುಕ್ರವಾರ ಬಂದ ವೈದ್ಯಕೀಯ ವರದಿಯಲ್ಲಿ 34 ಮಂದಿಯಲ್ಲಿ ಸೋಂಕು ದೃಢಪಟ್ಟಿತ್ತು. ಈ ಪೈಕಿ ಕಾಞಂಗಾಡ್ ದುರ್ಗಾ ಹಯರ್ ಸೆಕಂಡರಿ ಶಾಲೆಯ ವಿದ್ಯಾರ್ಥಿಯು ಒಳಗೊಂಡಿದ್ದಾನೆ.
ಕೇರಳದಲ್ಲಿ ಮಾರ್ಚ್ 17ರ ತನಕ ನಡೆದ ಎಸೆಸೆಲ್ಸಿ ಪರೀಕ್ಷೆಯನ್ನು ಈ ವಿದ್ಯಾರ್ಥಿಯೂ ಬರೆದಿದ್ದು, ಬಳಿಕ ಪರೀಕ್ಷೆ ಮುಂದೂಡಿತ್ತು. ಈ ನಡುವೆ ಸೋಂಕು ದೃಢಗೊಂಡಿರುವ ವಿದ್ಯಾರ್ಥಿ ಜೊತೆ ಪರೀಕ್ಷೆ ಬರೆದ ಸಹಪಾಠಿಗಳನ್ನು ಹಾಗೂ ಮನೆಗಳಲ್ಲಿರುವವರನ್ನು ನಿಗಾದಲ್ಲಿರಿಸಲಾಗಿದೆ.
ಮಾ.17ರಂದು ವಿದೇಶದಿಂದ ಆಗಮಿಸಿದ್ದ ವಿದ್ಯಾರ್ಥಿಯ ತಂದೆಯಲ್ಲಿ ಮಾ.23ರಂದು ಸೋಂಕು ಕಂಡುಬಂದಿತ್ತು. ಬಳಿಕ ಇದೀಗ ವಿದ್ಯಾರ್ಥಿಯಲ್ಲಿ ಸೋಂಕು ಪತ್ತೆಯಾಗಿದೆ. ಜಿಲ್ಲೆಯಲ್ಲಿ ಒಟ್ಟು 81 ಕೊರೋನ ಪ್ರಕರಣಗಳು ಈಗಾಗಲೇ ದೃಢಪಟ್ಟಿವೆ.
Next Story