ಸುಳ್ಳು ಆರೋಪ ಹೊರಿಸಿ ಪ್ರಕರಣ ದಾಖಲು : ಅಫ್ವಾನ್
ಉಡುಪಿ, ಮಾ. 28: ‘ಮನೆಗೆ ಅಗತ್ಯವಾಗಿರುವ ಅಡುಗೆ ಅನಿಲ ತರಲು ಹೋಗಿದ್ದ ನಮ್ಮ ವಿರುದ್ಧ, ಮಲ್ಪೆ ಪೊಲೀಸರು ವಿನಾಕಾರಣ ಪದೇ ಪದೇ ಸಂಚರಿಸಿ ಲಾಕ್ಡೌನ್ ಉಲ್ಲಂಘನೆ ಮಾಡಿರುವುದಾಗಿ ಸುಳ್ಳು ಆರೋಪ ಮಾಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ’ ಎಂದು ಹೂಡೆಯ ಅಫ್ವಾನ್ ಬಿ. ಆರೋಪಿಸಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಹೂಡೆ ಗ್ರಾಮಕ್ಕೆ ಅಡುಗೆ ಅನಿಲ ಪೂರೈಕೆ ಮಾಡುವುದಿಲ್ಲ ಎಂಬ ಸಂದೇಶವನ್ನು ಕೇಳಿ, ಮನೆಯಲ್ಲಿ ಖಾಲಿಯಾಗಿರುವ ಅಡುಗೆ ಅನಿಲ ತರಲು ಕಾರಿನಲ್ಲಿ ಹೋಗಿದ್ದೇವೆ. ದಾರಿ ಮಧ್ಯೆ ಪೊಲೀಸರು ನಮ್ಮನ್ನು ತಡೆದು ಠಾಣೆಗೆ ಕರೆದೊಯ್ದು ಪ್ರಕರಣ ದಾಖಲಿಸಿದ್ದಾರೆ. ಈ ಸಂದರ್ಭ ಅಡುಗೆ ಅನಿಲದ ಸಿಲಿಂಡರ್ ತೋರಿಸಿದರೂ ಪೊಲೀಸರು ಬೆಲೆಯೇ ಕೊಡಲಿಲ್ಲ ಎಂದು ಅವರು ಹೇಳಿಕೆಯಲ್ಲಿ ದೂರಿದ್ದಾರೆ.
Next Story