ಒಎಸ್ಎಫ್,- ಎಸ್ಕೆ ಎಸ್ಸೆಸ್ಸೆಫ್ ಬೆಂಗ್ರೆ ಶಾಖೆಯಿಂದ ಆಹಾರ ಸಾಮಗ್ರಿ ವಿತರಣೆ
ಮಂಗಳೂರು, ಎ.2: ಓಲ್ಡ್ ಸ್ಟೂಡೆಂಟ್ ಫೆಡರೇಶನ್ (ಒಎಸ್ಎಫ್) ಟ್ರಸ್ಟ್ ಕಸ್ಬಾ ಬೆಂಗ್ರೆ ಮತ್ತು ಎಸ್ಕೆಎಸ್ಸೆಸ್ಸೆಫ್ ಬೆಂಗ್ರೆ ಶಾಖೆಯಿಂದ ಮಂಗಳೂರಿನ ದಾನಿಗಳ ನೆರವಿನಿಂದಾಗಿ ಅರ್ಹ ಬಡ ಹಾಗೂ ಮಧ್ಯಮ ವರ್ಗದ ಸುಮಾರು 220 ಕುಟುಂಬಗಳಿಗೆ ಆಹಾರ ಸಾಮಗ್ರಿಗಳನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಒಎಸ್ಎಫ್ ಸಂಘಟನೆಯ ಅಧ್ಯಕ್ಷ ನಿಸಾರ್ ಶೇಖ್, ಎಸ್ಕೆಎಸ್ಸೆಸ್ಸೆಫ್ ಬೆಂಗ್ರೆ ಶಾಖೆ ಅಧ್ಯಕ್ಷ ಹಾರೂನ್ ಇಸ್ಮಾಯೀಲ್, ಎಸ್ವೈಎಸ್ ಅಧ್ಯಕ್ಷ ಆಸಿಫ್, ಒಎಸ್ಎಫ್ ಗೌರವ ಅಧ್ಯಕ್ಷ ಬಿ.ಎಂ.ಹನೀಫ್, ಉಪಾಧ್ಯಕ್ಷ ಸದ್ದಾಂ, ಎಸ್ಕೆ ಎಸ್.ಬಿ.ವಿ. ವಿದ್ಯಾರ್ಥಿ ಸಂಘಟನೆಯ ಮುಖಂಡ ಅಲ್ಮಾಝ್ ಮಾಲಿಕ್ ಪ್ರಧಾನ ಕಾರ್ಯದರ್ಶಿ ಅಲ್ಪಾಝ್, ಶಫೀಕ್, ಬಿ.ಕೆ. ಮುಸ್ತಫ, ಅಫ್ರಾರ್ ಅಲಿ ಮುಂತಾದವರು ಉಪಸ್ಥಿತರಿದ್ದರು.
Next Story