'ದೈಜಿ ವರ್ಲ್ಡ್' ವೆಬ್ಸೈಟ್ ವಿರುದ್ಧ ದೂರು
ಮಂಗಳೂರು, ಎ.2: ದಿಲ್ಲಿಯಲ್ಕಿ ಕಳೆದ ತಿಂಗಳು ನಡೆದ ನಿಝಾಮುದ್ದೀನ್ ಧಾರ್ಮಿಕ ಕಾರ್ಯಕ್ರಮಕ್ಕೆ ಸಂಬಂಧಿಸಿ ನಗರದಿಂದ ಪ್ರಕಟಗೊಳ್ಳುವ 'ದೈಜಿ ವರ್ಲ್ಡ್' ವೆಬ್ಸೈಟ್ನಲ್ಲಿ ತಬ್ಲೀಗ್ ಜಮಾಅತ್ ಸಂಘಟನೆಯನ್ನು ಭಯೋತ್ಪಾದನೆಗೆ ನಂಟು ಕಲ್ಪಿಸಿ ವರದಿ ಪ್ರಕಟಿಸಿರುವ ವಿರುದ್ಧ ಬಂದರು ಠಾಣೆಯಲ್ಲಿ ಗುರುವಾರ ದೂರು ದಾಖಲಾಗಿದೆ.
ಎಸ್ಡಿಪಿಐ ಮಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರ ಸಮಿತಿಯ ಕಾರ್ಯದರ್ಶಿ ಅಕ್ಬರ್ ರಝಾ ಕುದ್ರೋಳಿ ನೀಡಿದ ದೂರಿನಂತೆ ಬಂದರು ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
Next Story