ಗಂಗೊಳ್ಳಿಯ ಮುಸ್ಲಿಂ ಕಮಿಟಿ ವತಿಯಿಂದ 600 ಮನೆಗಳಿಗೆ ದಿನಸಿ ವಿತರಣೆ
ಗಂಗೊಳ್ಳಿ: ಲಾಕ್ ಡೌನ್ ಹಿನ್ನೆಲೆಯಲ್ಲಿ ಸಂಕಷ್ಟದಲ್ಲಿರುವ ಬಡಕುಟುಂಬಗಳಿಗೆ ಗಂಗೊಳ್ಳಿಯ ಮುಸ್ಲಿಂ ಕಮಿಟಿ ನೆರವಿನ ಹಸ್ತ ಚಾಚಿದ್ದು, ಸುಮಾರು 600 ಮನೆಗಳಿಗೆ ದಿನ ಬಳಕೆಯ ವಸ್ತುಗಳನ್ನು ನೀಡಿ ಮಾನವೀಯತೆ ಮೆರೆದಿದ್ದಾರೆ.
ಜಮೀಯತುಲ್ ಮುಸ್ಲಿಮೀನ್ ಕಮಿಟಿಯ ಗಂಗೊಳ್ಳಿಯ ಅಧ್ಯಕ್ಷ ಪಿ.ಎಂ ಹಸೈನಾರ್ ನೇತೃತ್ವದ ತಂಡವು ಮಾನವೀಯ ಸೇವೆಯಲ್ಲಿ ತೊಡಗಿಸಿಕೊಂಡಿದ್ದು, ದಿನ ಬಳಕೆಯ 13 ವಸ್ತುಗಳನ್ನು ಒಳಗೊಂಡ ಕಿಟ್ ಅನ್ನು ಸುಮಾರು 600ರಷ್ಟು ಮನೆಗಳಿಗೆ ವಿತರಿಸಿದ್ದಾರೆ.
Next Story