ಕಾಸರಗೋಡು: ಶನಿವಾರ ಆರು ಮಂದಿಯಲ್ಲಿ ಕೊರೋನ ಸೋಂಕು ದೃಢ
ಕಾಸರಗೋಡು : ಕೇರಳದ ಇತರ ಜಿಲ್ಲೆಗಳಲ್ಲಿ ಕೊರೋನ ಸೋಂಕಿತರ ಸಂಖ್ಯೆ ಇಳಿಮುಖವಾಗುತ್ತಿದ್ದರೂ ಕಾಸರಗೋಡು ಜಿಲ್ಲೆಯಲ್ಲಿ ಏರಿಕೆಯಾಗುತ್ತಿದೆ. ಶನಿವಾರ ಕಾಸರಗೋಡಿನಲ್ಲಿ ಆರು ಮಂದಿಯಲ್ಲಿ ಸೋಂಕು ದೃಢಪಟ್ಟಿದೆ.
ರಾಜ್ಯದಲ್ಲಿ ಇಂದು 11 ಮಂದಿಯಲ್ಲಿ ಕೊರೋನ ಸೋಂಕು ಪತ್ತೆಯಾಗಿದ್ದು, ಈ ಪೈಕಿ ಆರು ಪ್ರಕರಣ ಕಾಸರಗೋಡಿಗೆ ಸೇರಿದೆ. ಇದರಿಂದ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 141 ಕ್ಕೇರಿದೆ. ಕಾಸರಗೋಡಿನ ಸೋಂಕಿತರ ಪೈಕಿ ಮೂವರು ದುಬೈಯಿಂದ ಮತ್ತು ಓರ್ವ ದೆಹಲಿಯಿಂದ ಬಂದವರೆಂದು ಆರೋಗ್ಯ ಇಲಾಖೆ ತಿಳಿಸಿದೆ.
Next Story