ಸೈಬರ್ ಕ್ರೈಂ ಸಂಬಂಧಿಸಿದಂತೆ ದೂರು ನೀಡುವವರಿಗೆ ಪೊಲೀಸ್ ಇಲಾಖೆ ಸೂಚನೆ
ಮಂಗಳೂರು, ಎ.7: ಸೈಬರ್ ಕ್ರೈಂಗೆ ಸಂಬಂಧಿಸಿದಂತೆ ದೂರು ನೀಡುವವರು ಸಮೀಪದ ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ತೆರಳಿ ಸ್ವತಃ ದೂರು ನೀಡಬಹುದು ಅಥವಾ ಹತ್ತಿರದ ಯಾವುದೇ ಪೊಲೀಸ್ ಠಾಣೆಗೆ ದೂರು ನೀಡಬಹುದಾಗಿದೆ.
ದೂರು ನೀಡುವವರು ತಮ್ಮ ವಿಳಾಸ, ದೂರವಾಣಿ ಸಂಖ್ಯೆಯನ್ನು ನೀಡಬೇಕಾಗುತ್ತದೆ. ವಿಳಾಸ ದೃಢೀಕರಿಸುವ ಆಧಾರ್ ಅಥವಾ ಇತರ ದಾಖಲೆ ನೀಡಬೇಕು. ಠಾಣೆಗೆ ಬಂದು ದೂರು ನೀಡಲು ಸಾಧ್ಯವಾಗದಿದ್ದರೆ ಆಧಾರ್ ಕಾರ್ಡ್ ದಾಖಲೆಯೊಂದಿಗೆ ವಾಟ್ಸ್ಆ್ಯಪ್ ಮೂಲಕ ದೂರು ನೀಡಬಹುದಾಗಿದೆ.
ಯಾವ ಮೊಬೈಲ್ ಸಂಖ್ಯೆಯಿಂದ ಯಾವ ಸಂದೇಶ ಬಂದಿದೆ ಎನ್ನುವ ಮಾಹಿತಿಯನ್ನು ಕೂಡ ನೀಡಬೇಕು. ಯಾವ ಗ್ರೂಪ್ನ ಯಾವ ಸಂಖ್ಯೆಯಿಂದ ಸಂದೇಶ ರವಾನೆಯಾಗಿರುತ್ತದೆ ಎನ್ನುವ ಮಾಹಿತಿ ಮತ್ತು ಗ್ರೂಫ್ ಎಡ್ಮಿನ್ ಯಾರು ಎನ್ನುವ ಮಾಹಿತಿ ಒಳಗೊಂಡಿದ್ದರೆ ಶೀಘ್ರ ವಾಗಿ ಆರೋಪಿಗಳನ್ನು ಪತ್ತೆ ಹಚ್ಚಲು ಸಾಧ್ಯವಾಗುತ್ತದೆ. ನ್ಯಾಶನಲ್ ಸೈಬರ್ ಕ್ರೈಂ ರಿಪೋರ್ಟಿಂಗ್ ಪೊರ್ಟ್ಲ್ಗೂ ಆನ್ಲೈನ್ ಮೂಲಕ ದೂರು ನೀಡಬಹುದಾಗಿದೆ ಎಂದು ಪೊಲೀಸ್ ಆಯುಕ್ತರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Next Story