ಕೋಳಿ ಅಂಕಕ್ಕೆ ದಾಳಿ: ಏಳು ಮಂದಿ ಬಂಧನ
ಕೋಟ, ಎ.7: ಲಾಕ್ಡೌನ್ ಮಧ್ಯೆ ಕಾವಡಿ ಗ್ರಾಮದ ಹೌರಾಲ ಎಂಬಲ್ಲಿ ರುವ ಶ್ರೀಮಹಾಲಿಂಗೇಶ್ವರ ದೇವಸ್ಥಾನದ ಸಮೀಪ ಎ. 6ರಂದು ಕಾನೂನು ಬಾಹಿರವಾಗಿ ಕೋಳಿ ಅಂಕ ಜುಗಾರಿ ಆಡುತ್ತಿದ್ದ ಏಳು ಮಂದಿಯನ್ನು ಕೋಟ ಪೊಲೀಸರು ಬಂಧಿಸಿದ್ದಾರೆ.
ಹೌರಾಲುವಿನ ಮಧುಕರ(33), ಜಯರಾಮ ಶೆಟ್ಟಿ(49), ಪ್ರಶಾಂತ(42), ಕಾರ್ಕಡದ ರಾಘವೇಂದ್ರ(39), ಸುಧಾಕರ(39), ಬಾರಕೂರಿನ ಲೊಕೇಶ್ ನಾಯ್ಕ(35), ಹೆರಾಡಿಯ ಸುಕೇತ(29) ಬಂಧಿತ ಆರೋಪಿಗಳು. ಇಬ್ಬರು ಆರೋಪಿಗಳು ಓಡಿ ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಇವರಿಂದ ಎರಡು ಬೈಕು, 6,880ರೂ. ನಗದು, ಎರಡು ಕೋಳಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಇವುಗಳ ಒಟ್ಟು ಮೌಲ್ಯ 1,72,880ರೂ. ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story