ಮಂಗಳೂರು: ಎ.9-10rರಂದು ನೀರು ಪೂರೈಕೆ ಸ್ಥಗಿತ
ಮಂಗಳೂರು, ಎ.8: ಮಂಗಳೂರು ಮಹಾನಗರಪಾಲಿಕೆಯ ನೀರು ಸರಬರಾಜು ವ್ಯವಸ್ಥೆಯ ತುಂಬೆ ಎಚ್ಎಲ್ಪಿಎಸ್ 1 ಸ್ಥಾವರದಲ್ಲಿ ಪಂಪ್ ನಂ-1 ಹಾಗೂ ಎನ್ಆರ್ವಿ ಚಕ್ವಾಲ್ವ್ ಅಳವಡಿಸಬೇಕಾಗಿರುವುದರಿಂದ ಎ.9ರಂದು ಬೆಳಗ್ಗೆ 8 ಗಂಟೆಯಿಂದ ಎ.10ರಂದು ಬೆಳಗ್ಗೆ 8ರವರೆಗೆ ಸುರತ್ಕಲ್, ಪಣಂಬೂರು, ಕುಳಾಯಿ, ಕಾನ, ಕಾಟಿಪಳ್ಳ, ಎನ್ಐಟಿಕೆ, ಸಸಿಹಿತ್ಲು, ಕೂಳೂರು, ಕೊಟ್ಟಾರ ಭಾಗಶಃ, ಬೆಂದೂರು ಲೋ-ಲೆವೆಲ್ ಪ್ರದೇಶಗಳಾದ ಕಾರ್ಸ್ಟ್ರೀಟ್, ಕುದ್ರೋಳಿ, ಫಿಶಿಂಗ್ ಹಾರ್ಬರ್, ಕೊಡಿಯಾಲ್ಬೈಲ್ ಇತ್ಯಾದಿ ಪ್ರದೇಶಗಳಿಗೆ ಸಂಪೂರ್ಣವಾಗಿ ನೀರು ನಿಲುಗಡೆ ಯಾಗಲಿದೆ ಎಂದು ಪ್ರಕಟನೆ ತಿಳಿಸಿದೆ.
Next Story