ಲಾಕ್ ಡೌನ್ : ಮಕ್ಕಳಿಗಾಗಿ ರಾಷ್ಟ್ರ ಮಟ್ಟದ ಆನ್ ಲೈನ್ ಕಿರಾಅತ್ ಸ್ಪರ್ಧೆ
ಮಂಗಳೂರು : ಮಿಲ್ಲತ್ ಫೌಂಡೇಶನ್ ಕುಂದಾಪುರ ವತಿಯಿಂದ ಮಕ್ಕಳಿಗಾಗಿ ಆನ್ ಲೈನ್ ಕಿರಾಅತ್ ಸ್ಪರ್ಧೆ ಏರ್ಪಡಿಸಲಾಗಿದೆ.
12 ವರ್ಷ ಒಳಗಿನ ಬಾಲಕರು ಮತ್ತು 9 ವರ್ಷ ಒಳಗಿನ ಬಾಲಕಿಯರು ಈ ಸ್ಪರ್ಧೆಗೆ ಭಾಗವಹಿಸಲು ಅರ್ಹರಾಗಿರುತ್ತಾರೆ. ವೀಡಿಯೊ ಅಚ್ಚುಕಟ್ಟಾಗಿರ ಬೇಕು ಮತ್ತು 2 ನಿಮಿಷಕ್ಕಿಂತ ಮೀರಿರಬಾರದು. ರೆಕಾರ್ಡ್ ಮಾಡಿದ ವೀಡಿಯೊ ಪೂರ್ಣ ಹೆಸರು ಮತ್ತು ವಿಳಾಸದೂಂದಿಗೆ ವಾಟ್ಸ್ಆ್ಯಪ್ ಮೂಲಕ 9916690891 ಈ ನಂಬರಿಗೆ ಕಳುಹಿಸಬೇಕು. ವೀಡಿಯೊ ಕಳುಹಿಸಲು ಎ. 15 ಕೊನೆಯ ದಿನಾಂಕ ಆಗಿರುತ್ತದೆ.
ಬಹುಮಾನಗಳು: ಪ್ರಥಮ ರೂ 3000/- ದ್ವಿತೀಯ ರೂ 2000/- ತೃತೀಯ ರೂ 1000/- ಭಾಗವಹಿಸಿದ ಎಲ್ಲಾ ಸ್ಪರ್ಧಾಳುಗಳಿಗೆ ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಗುವುದು. ಹೆಚ್ಚಿನ ಮಾಹಿತಿಗಾಗಿ ಝಮೀರ್ ಅಹ್ಮದ್ ರಶಾದಿ 9880122968 ಅವರನ್ನು ಸಂಪರ್ಕಿಸಲು ಪ್ರಕಟನೆ ತಿಳಿಸಿದೆ.
Next Story