ಫೋರಮ್ ಮಾಲ್ನಿಂದ ಬಡವರಿಗೆ ಆಹಾರ, ದಿನಸಿ ವಿತರಣೆ
ಮಂಗಳೂರು : ನಗರದ ಹೃದಯಭಾಗದಲ್ಲಿ ಫೋರಮ್ ಫಿಝಾ ಮಾಲ್ ಮ್ಯಾನೇಜ್ಮೆಂಟ್ನಿಂದ ಬಡವರು, ದಿನಕೂಲಿ ಕಾರ್ಮಿಕರು, ನಿರ್ಗತಿಕರಿಗೆ ಆಹಾರ ಮತ್ತು 1600 ರೂ. ಮೌಲ್ಯದ ದಿನಸಿಯನ್ನು ವಿತರಿಸಲಾಯಿತು.
ವಿಶ್ವಾದ್ಯಂತ ತಲ್ಲಣ ಸೃಷ್ಟಿಸಿದ ಕೊರೋನ ವೈರಸ್ ರಾಜ್ಯದಲ್ಲೂ ತಾಂಡವಾಡುತ್ತಿದೆ. ಕೊರೋನ ಸೋಂಕು ನಿಯಂತ್ರಣಕ್ಕಾಗಿ ಲಾಕ್ಡೌನ್ ಜಾರಿಗೊಳಿಸಲಾಗಿದ್ದು, ಈ ಹಿನ್ನೆಲೆಯಲ್ಲಿ ಆಹಾರದಿಂದ ವಂಚಿತರಾದವರಿಗೆ ಫೋರಮ್ ಮಾಲ್ ಮ್ಯಾನೇಜ್ಮೆಂಟ್ ವತಿಯಿಂದ ಪ್ರತಿದಿನವೂ ದೀನಸಿ ಸಾಮಗ್ರಿಗಳನ್ನು ವಿತರಿಸಲಾಗುತ್ತಿದೆ.
Next Story