ಬಾರ್ಗೆ ನುಗ್ಗಿ ಮದ್ಯ ಕಳವು
ಕೋಟ, ಎ.24: ಬಾಳ್ಕುದ್ರು ಗ್ರಾಮದ ಹಂಗಾರಕಟ್ಟೆಯಲ್ಲಿ ಚಕ್ರವರ್ತಿ ಬಾರ್ ಆ್ಯಂಡ್ ರೆಸ್ಟೋರೆಂಟ್ಗೆ ಎ.22ರಂದು ರಾತ್ರಿ ವೇಳೆ ನುಗ್ಗಿದ ಕಳ್ಳರು ಲಕ್ಷಾಂತರ ರೂ. ಮೌಲ್ಯದ ಮದ್ಯ ಕವು ಮಾಡಿರುವ ಬಗ್ಗೆ ವರದಿಯಾಗಿದೆ.
ಐರೋಡಿಯ ಶಂಕರ ಎ.ಕುಂದರ್ ಎಂಬವರ ಬಾರ್ನ ಶೆಟರ್ಗೆ ಹಾಕಿದ ಸೀಲ್ ಒಡೆದು ಒಳನುಗ್ಗಿದ ಕಳ್ಳರು, 266.735 ಲೀಟರ್ ಮದ್ಯ ತುಂಬಿರುವ ಸುಮಾರು 31 ಬಾಕ್ಸ್ ಹಾಗೂ 44.250 ಲೀಟರ್ ಬಿಯರ್ ಇರುವ 3 ಬಾಕ್ಸ್ಗಳನ್ನು ಕಳವು ಮಾಡಿದ್ದಾರೆ. ಇವುಗಳ ಮೌಲ್ಯ 1,50,000ರೂ. ಎಂದು ಅಂದಾಜಿಸಲಾಗಿದೆ.
ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story