ವಿಟ್ಲ ಪೊಲೀಸ್ ಠಾಣೆಯ ಕಾನ್ಸ್ ಟೇಬಲ್ ಗೆ ಕೊರೋನ ಪಾಸಿಟಿವ್
ವಿಟ್ಲ, ಮೇ.24: ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಪೊಲೀಸ್ ಕಾನ್ ಸ್ಟೇಬಲ್ ಒಬ್ಬರಿಗೆ ಕೊರೋನ ಪಾಸಿಟಿವ್ ಬಂದಿದ್ದು, ಮುಂಬೈಯಿಂದ ಆಗಮಿಸಿದ ವ್ಯಕ್ತಿಯಿಂದ ಪೊಲೀಸ್ ಗೆ ಕೊರೋನ ತಗಲಿದೆ ಎಂದು ತಿಳಿದುಬಂದಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ವಿಟ್ಲದ ಪೊಲೀಸ್ ಠಾಣೆಯ 42 ವರ್ಷದ ಕಾನ್ ಸ್ಟೇಬಲ್ ಗೆ ಕೊರೋನ ದೃಢಪಟ್ಟಿದೆ.
ಮೇ.14ರಂದು ಮಹರಾಷ್ಟ್ರದ ರಾಯಗಡದಿಂದ ಬಂದಿದ್ದ ವ್ಯಕ್ತಿ ಕ್ವಾರಂಟೈನ್ ಗೆ ಹೋಗುವ ಮುನ್ನ ಪೊಲೀಸ್ ಠಾಣೆಗೆ ಹೋಗಿದ್ದ. ಬಳಿಕ ವ್ಯಕ್ತಿಯನ್ನು ಕ್ವಾರಂಟೈನ್ ನಲ್ಲಿಡಲಾಗಿತ್ತು. ನಾಲ್ಕು ದಿನ ಕ್ವಾರಂಟೈನ್ ನಲ್ಲಿದ್ದ ವ್ಯಕ್ತಿಗೆ ಮೇ.18 ರಂದು ಪಾಸಿಟಿವ್ ಬಂದಿದ್ದು, ಹೀಗಾಗಿ ಮೇ.18 ರಿಂದ ವಿಟ್ಲ ಠಾಣೆಯ ಮೂವರು ಪೊಲೀಸರನ್ನು ಕ್ವಾರಂಟೈನ್ ಮಾಡಲಾಗಿತ್ತು. ಇವರಲ್ಲಿ ಓರ್ವ ಪೊಲೀಸ್ ಗೆ ಇಂದು ಕೊರೋನ ದೃಢಪಟ್ಟಿದೆ.
Next Story