ಉಡುಪಿಯಲ್ಲಿ 3 ಕೊರೋನ ಪಾಸಿಟಿವ್ : ಜಿಲ್ಲಾಧಿಕಾರಿ ಜಗದೀಶ್
ಉಡುಪಿ, ಮೇ 26: ಮಹಾರಾಷ್ಟ್ರದಿಂದ ಆಗಮಿಸಿದ ಜಿಲ್ಲೆಯ ಮೂವರಲ್ಲಿ ಇಂದು ಕೊರೋನ ಸೋಂಕು ಕಂಡುಬಂದಿದೆ ಎಂದು ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್ ಅವರು ತಿಳಿಸಿದ್ದಾರೆ.
ರಾಜ್ಯ ಆರೋಗ್ಯ ಇಲಾಖೆ ಪ್ರಕಟಿಸಿದ ಮಧ್ಯಾಹ್ನದ ಸೋಂಕಿತರ ಪಟ್ಪಿಯಲ್ಲಿ ಮತ್ತೆ ರಾಜ್ಯದ 100 ಮಂದಿಯಲ್ಲಿ ಕೊರೋನ ಸೋಂಕು ಕಾಣಿಸಿಕೊಂಡಿದ್ದು, ಇದರಲ್ಲಿ ಮೂವರು ಉಡುಪಿ ಜಿಲ್ಲೆಯವರು.
ಜಿಲ್ಲೆಗೆ ಮಹಾರಾಷ್ಟ್ರದಿಂದ ಬಂದ 27ರ ಯುವಕ, 30ರ ಮಹಿಳೆ ಹಾಗೂ 9 ವರ್ಷ ಪ್ರಾಯದ ಹೆಣ್ಣು ಮಗುವಿನಲ್ಲಿ ಕೊರೋನ ಪಾಸಿಟಿವ್ ಕಂಡು ಬಂದಿದೆ. ಈ ಮೂಲಕ ಉಡುಪಿಯಲ್ಲಿ ಈವರೆಗೆ ಒಟ್ಪು 111 ಪಾಸಿಟಿವ್ ಪ್ರಕರಣ ವರದಿಯಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
Next Story