ಪ್ರಜ್ಞಾ ಕೌನ್ಸಿಲಿಂಗ್ ಕೇಂದ್ರದ ಹುದ್ದೆಗಳಿಗೆ ಅರ್ಜಿ ಆಹ್ವಾನ
ಮಂಗಳೂರು, ಮೇ 27: ಕೇಂದ್ರ ಸರಕಾರದ ಸಾಮಾಜಿಕ ನ್ಯಾಯ ಮತ್ತು ಸಬಲತಾ ಮಂತ್ರಾಲಯ ಪ್ರಾಯೋಜಿತ ಪ್ರಜ್ಞಾ ಐಆರ್ಸಿಎ (ಡಿಎಡಿಕ್ಷನ್) ಕೇಂದ್ರಕ್ಕೆ ಮಾಸಿಕ ನಿಗದಿತ ಗೌರವಧನ ಆಧಾರದಲ್ಲಿ ಕೆಲವು ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.
1.ಸಮಾಲೋಚಕ ಹುದ್ದೆಗೆ ಎಂಎಸ್ಡಬ್ಲು (ಮೆಡಿಕಲ್ ಆ್ಯಂಡ್ ಸೈಕ್ಯಾಟ್ರಿಕ್), 2. ನರ್ಸ್ ಹುದ್ದೆಗೆ ಎಎನ್ಎಂ ಅಥವಾ ತತ್ಸಮಾನ, 3. ಯೋಗ ಥೆರಪಿಸ್ಟ್ ಹುದ್ದೆಗೆ ಅಂಗೀಕೃತ ಸಂಸ್ಥೆಯಿಂದ ತರಬೇತಿ ಪಡೆದವರಿಂದ ಅರ್ಜಿ ಆಹ್ವಾನಿಸಲಾಗಿದೆ.
ಈ ಹುದ್ದೆಗಳಿಗೆ ಕನಿಷ್ಠ 2 ವರ್ಷದ ಅನುಭವ ಹೊಂದಿರಬೇಕು. ಅರ್ಜಿಯನ್ನು ಸೂಕ್ತ ದಾಖಲೆಗಳೊಂದಿಗೆ ಜೂ.6ರೊಳಗೆ ನಿರ್ದೇಶಕರು ಪ್ರಜ್ಞಾ ಕೌನ್ಸಿಲಿಂಗ್ ಸೆಂಟರ್, ಫಳ್ನೀರ್ ರೋಡ್, ಕಂಕನಾಡಿ ಮಂಗಳೂರು -575005 ಈ ವಿಳಾಸಕ್ಕೆ ಕಳುಹಿಸಬೇಕು. ಮಾಹಿತಿಗಾಗಿ ದೂ.ಸಂ: 0824-2432682, 2432133ಯನ್ನು ಸಂಪರ್ಕಿಸಹುದು ಎಂದು ಪ್ರಕಟನೆ ತಿಳಿಸಿದೆ.
Next Story