ಕೊರೋನ ಹಾವಳಿ ಹಿನ್ನೆಲೆ: ಜುಮಾ ನಮಾಝ್ ಇಲ್ಲದ 10ನೆ ‘ಶುಕ್ರವಾರ’
ಮಂಗಳೂರು, ಮೇ 29: ಕೊರೋನ ವೈರಸ್ ಸೋಂಕು ಹರಡುವುದನ್ನು ತಡೆಗಟ್ಟುವ ಸಲುವಾಗಿ ವಿಧಿಸಲಾದ ಲಾಕ್ಡೌನ್ಗೆ ಪೂರಕವಾಗಿ ಮಸೀದಿಗಳಲ್ಲಿ ಸಾಮೂಹಿಕವಾಗಿ ನಮಾಝ್ ನಿರ್ವಹಿಸದಂತೆ ರಾಜ್ಯ ಸರಕಾರದ ಸೂಚನೆ, ಖಾಝಿಗಳ ನಿರ್ದೇಶನದಂತೆ ಮೇ 29ರ ‘ಶುಕ್ರವಾರ’ ಮಧ್ಯಾಹ್ನವೂ ಜುಮಾ ನಮಾಝ್ ನಿರ್ವಹಿಸದೆ ಮುಸ್ಲಿಮರು ತಮ್ಮ ಮನೆಗಳಲ್ಲೇ ಲುಹರ್ ನಮಾಝ್ ಮಾಡಿದರು. ಸತತ 10 ಶುಕ್ರವಾರ ಜುಮಾ ನಮಾಝ್ನಿಂದ ವಂಚಿತರಾದರು.
ಮಾ.27 ಮತ್ತು ಎ.3 ಹಾಗೂ ಎ.10, ಎ.17, ಎ.24. ಮೇ 1, ಮೇ 8, ಮೇ 15, ಮೇ 22ರ ‘ಶುಕ್ರವಾರ’ವನ್ನು ಜುಮಾ ನಮಾಝ್ ಇಲ್ಲದೆ ಕಳೆದಿದ್ದರು.
ದ.ಕ. ಜಿಲ್ಲೆಯ ಯಾವುದೇ ಮಸೀದಿಗಳಲ್ಲಿ ಶುಕ್ರವಾರ ಜುಮಾ ನಮಾಝ್ ಇರಲಿಲ್ಲ. ಮಸೀದಿಗಳ ಇಮಾಮ್ ಮತ್ತು ಮುಅದ್ಸಿನ್ ಹಾಗೂ ಇತರ ಸಿಬ್ಬಂದಿ ವರ್ಗವು ಮಸೀದಿಯಲ್ಲಿ ಮತ್ತು ಸಮುದಾಯದ ಇತರರು ಮನೆಯಲ್ಲಿ ಲುಹರ್ ನಮಾಝ್ ನಿರ್ವಹಿಸಿ ಸಮಾಜದ ಸರ್ವರ ಹಿತ ಕಾಪಾಡುವುದರೊಂದಿಗೆ ಕಾನೂನಿಗೆ ಗೌರವ ನೀಡಿ ಗಮನ ಸೆಳೆದರು.
Next Story