ಉಡುಪಿ: ಕ್ವಾರಂಟೈನ್ ಕೇಂದ್ರಗಳಲ್ಲಿ 194 ಮಂದಿ
ಉಡುಪಿ, ಮೇ 30: ರಾಜ್ಯ ಸರಕಾರ ಹೊಸ ನಿಯಮಗಳಂತೆ ಹೊರದೇಶ, ಹೊರರಾಜ್ಯಗಳಿಂದ ಮರಳಿ ಬಂದು ಜಿಲ್ಲೆಯ ವಿವಿಧ ಕ್ವಾರಂಟೈನ್ ಕೇಂದ್ರಗಳಲ್ಲಿ ಇದ್ದವರನ್ನು ಬಿಡುಗಡೆಗೊಳಿಸಿದ್ದು, ಇದೀಗ ಕೊರೋನದ ಪ್ರಾಥಮಿಕ ಲಕ್ಷಣಗಳನ್ನು ಹೊಂದಿರುವ 194 ಮಂದಿ ಕೇಂದ್ರಗಳಲ್ಲಿ ಉಳಿದುಕೊಂಡಿದ್ದಾರೆ ಎಂದು ಡಿಎಚ್ಓ ಡಾ.ಸುಧೀರ್ಚಂದ್ರ ಸೂಡ ತಿಳಿಸಿದ್ದಾರೆ.
ಇವರಲ್ಲಿ ಉಡುಪಿ ತಾಲೂಕಿನಲ್ಲಿ 53 ಮಂದಿ, ಕುಂದಾಪುರದಲ್ಲಿ 60 ಹಾಗೂ ಕಾರ್ಕಳದ ಕ್ವಾರಂಟೈನ್ ಕೇಂದ್ರಗಳಲ್ಲಿ 81 ಮಂದಿ ಉಳಿದು ಕೊಂಡಿದ್ದಾರೆ ಎಂದು ಅವರು ವಿವರಿಸಿದರು.
Next Story