ಲಾಕ್ಡೌನ್ ಸಡಿಲಿಕೆ: ಉಡುಪಿಯಲ್ಲಿ ವಾಹನ ಸಂಚಾರ ವಿರಳ
ಉಡುಪಿ, ಮೇ 31: ರಾಜ್ಯ ಸರಕಾರ ಈ ರವಿವಾರ ಲಾಕ್ಡೌನ್ ಸಡಿಲಿಕೆ ಮಾಡಿ ಆದೇಶ ಹೊರಡಿಸಿರುವುದರಿಂದ ಜಿಲ್ಲೆಯಾದ್ಯಂತ ವಾಣಿಜ್ಯ ಚಟುವಟಿಕೆ ಮತ್ತು ವಾಹನ ಸಂಚಾರ ಸಾಮಾನ್ಯವಾಗಿತ್ತು.
ರಜಾ ದಿನ ಆಗಿರುವುದರಿಂದ ಉಡುಪಿ ನಗರ, ಕುಂದಾಪುರ, ಕಾರ್ಕಳ, ಬೈಂದೂರು, ಕಾಪು, ಪಡುಬಿದ್ರೆಗಳಲ್ಲಿ ಬಹುತೇಕ ಅಂಗಡಿಗಳು ಬಂದ್ ಆಗಿದ್ದವು. ರಾಷ್ಟ್ರೀಯ ಹೆದ್ದಾರಿ ಸೇರಿದಂತೆ ನಗರದ ಪ್ರಮುಖ ರಸ್ತೆಗಳಲ್ಲಿ ವಾಹನಳ ಸಂಖ್ಯೆ ತುಂಬಾ ವಿರಳವಾಗಿತ್ತು.
ಇತರ ದಿನಗಳಿಗಿಂತ ಈ ದಿನ ಪ್ರಯಾಣಿಕರಿಲ್ಲದ ಕಾರಣ ಖಾಸಗಿ ಬಸ್ ಸಂಚಾರ ಕಡಿಮೆ ಇರುವುದು ಕಂಡುಬಂತು. ಅದೇ ರೀತಿ ಸರಕಾರಿ ಬಸ್ಗಳು ಹಾಗೂ ಆಟೋರಿಕ್ಷಾ, ಟ್ಯಾಕ್ಸಿಗಳು ಕೂಡ ಇಂದು ಓಡಾಟ ನಡೆಸಿದವು. ಆದರೆ ಪ್ರಯಾಣಿಕರ ಸಂಖ್ಯೆ ಮಾತ್ರ ಬೆರಳೆಣಿಕೆಯಲ್ಲಿರುವುದು ಕಂಡುಬಂತು.
Next Story