ಸೆಲೂನ್ಗೆ ಇನ್ನು ‘ರವಿವಾರ’ ರಜೆ
ಮಂಗಳೂರು, ಮೇ 31: ದ.ಕ. ಮತ್ತು ಉಡುಪಿ ಜಿಲ್ಲೆಯಲ್ಲಿ ಸೆಲೂನ್ಗಳಿಗೆ ಈವರೆಗಿದ್ದ ಮಂಗಳವಾರದ ರಜೆಯ ಬದಲು ರವಿವಾರ ರಜೆ ನೀಡಲು ನಿರ್ಧಾರ ಮಾಡಲಾಗಿದೆ ಎಂದು ದ ಕ. ಜಿಲ್ಲಾ ಸವಿತಾ ಸಮಾಜ ತಿಳಿಸಿದೆ.
ಲಾಕ್ಡೌನ್ ವೇಳೆ ಸೆಲೂನ್ಗಳು ಕೂಡ ಬಂದ್ ಮಾಡಿ ಬೆಂಬಲ ವ್ಯಕ್ತಪಡಿಸುತ್ತಿದ್ದವು. ರವಿವಾರ ಲಾಕ್ಡೌನ್ ಇಲ್ಲದೇ ಇದ್ದರೂ ಕೂಡ ಶೇ.80ರಷ್ಟು ಸೆಲೂನ್ ಬಂದ್ ಆಗಿತ್ತು. ಹಾಗಾಗಿ ಇನ್ನು ಮುಂದೆ ಮಂಗಳವಾರದ ಬದಲು ರವಿವಾರ ರಜೆ ನೀಡಲು ನಿರ್ಧಾರ ಮಾಡಲಾಗಿದೆ ಎಂದು ದ.ಕ. ಜಿಲ್ಲಾ ಸವಿತಾ ಸಮಾಜದ ಅಧ್ಯಕ್ಷ ಆನಂದ ಭಂಡಾರಿ ಹಾಗೂ ಪ್ರಧಾನ ಕಾರ್ಯದರ್ಶಿ ವಸಂತ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Next Story