ಮಂಚಿ: ಅಂಗಡಿ ಬಾಡಿಗೆ ಮನ್ನಾ ಮಾಡುವಂತೆ ಗ್ರಾಪಂಗೆ ಎಸ್.ಡಿ.ಪಿ.ಐ. ಮನವಿ
ಬಂಟ್ವಾಳ, ಮೇ 31: ಲಾಕ್ ಡೌನ್ ನಿಂದ ವ್ಯಾಪಾರಿಗಳು ಸಂಕಷ್ಟಕ್ಕೀಡಾಗಿರುವುದರಿಂದ ಮಂಚಿ ಗ್ರಾಮ ಪಂಚಾಯತ್ ಗೆ ಸೇರಿದ ಎಲ್ಲಾ ಅಂಗಡಿಗಳ ಎರಡು ತಿಂಗಳ ಬಾಡಿಗೆಯನ್ನು ಮನ್ನಾ ಮಾಡುವಂತೆ ಆಗ್ರಹಿಸಿ ಎಸ್.ಡಿ.ಪಿ.ಐ. ಮಂಚಿ ವಲಯ ಸಮಿತಿಯ ವತಿಯಿಂದ ಗ್ರಾಮ ಪಂಚಾಯತ್ ಗೆ ಮನವಿ ಸಲ್ಲಿಸಲಾಯಿತು.
ಮಂಚಿ ಪಂಚಾಯತ್ ವ್ಯಾಪ್ತಿಯಲ್ಲಿ ಹಲವು ವರ್ಷಗಳಿಂದ ಗ್ರಾಮಸ್ಥರು ಅನುಭವಿಸುವ ಸಮಸ್ಯೆಗಳು, ವಿವಿಧೆಡೆ ರಸ್ತೆ ಬದಿಯಲ್ಲಿ ತ್ಯಾಜ್ಯ ಎಸೆಯು ತ್ತಿದ್ದು ಇದಕ್ಕೆ ಸೂಕ್ತ ಪರಿಹಾರ ಕಂಡುಕೊಳ್ಳುವಂತೆಯೂ ಮನವಿಯಲ್ಲಿ ಆಗ್ರಹಿಸಲಾಗಿದೆ.
ಎಸ್.ಡಿ.ಪಿ.ಐ. ಮಂಚಿ ವಲಯ ಸಮಿತಿ ಅಧ್ಯಕ್ಷ ನವಾಝ್ ಕೋಡಿಬೈಲ್, ಬಂಟ್ವಾಳ ಕ್ಷೇತ್ರ ಸಮೀತಿ ಸದಸ್ಯ ಫೈಝಲ್ ಮಂಚಿ, ಮಂಚಿ ವಲಯ ಸಮಿತಿ ಉಪಾಧ್ಯಕ್ಷ ಮಜೀದ್ ಕುಕ್ಕಾಜೆ, ಕಾರ್ಯದರ್ಶಿ ಡಿ.ಎನ್.ಫಾರೂಕ್ ಮಂಚಿ, ಕಾರ್ಯಕರ್ತರಾದ ಶರೀಫ್ ಕುಕ್ಕಾಜೆ, ಮುಫ್ರಾದ್ ಕುಕ್ಕಾಜೆ, ಮುಹೀನ್ ಕುಕ್ಕಾಜೆ, ನೌಫಲ್, ಮೋನು ಕುಕ್ಕಾಜೆ ಮೊದಲಾದವರು ಉಪಸ್ಥಿತರಿದ್ದರು.
Next Story