ಮೀಟರ್ ಸತ್ಯಾಪನೆ ಪ್ರಕ್ರಿಯೆಗೆ ಅಧಿಕ ದರ ನಿಗದಿ : ಎಸ್ಡಿಟಿಯು ನಿಯೋಗ ಜಿಲ್ಲಾಧಿಕಾರಿಗೆ ಮನವಿ
ಮಂಗಳೂರು, ಜೂ.3: ಆಟೋ ರಿಕ್ಷಾ ದರ ಪರಿಷ್ಕರಣೆಯ ಮೀಟರ್ ಸತ್ಯಾಪನೆ ಮತ್ತು ತೂಕ ಮಾಪನ ಶಾಸ್ತ್ರ ಇಲಾಖೆಯ ದೃಢೀಕರಣ ಮಾಡುವ ಪ್ರಕ್ರಿಯೆಯಲ್ಲಿ ತಾಂತ್ರಿಕ ಡೀಲರ್ಗಳು ದುಬಾರಿ ವೆಚ್ಚ ನಿಗದಿಪಡಿಸಿರುವುದನ್ನು ಆಕ್ಷೇಪ ವ್ಯಕ್ತಪಡಿಸಿ ಎಸ್ಡಿಟಿಯು ಅಧೀನದಲ್ಲಿರುವ ಸೋಶಿಯಲ್ ಡೆಮಾಕ್ರೆಟಿಕ್ ಆಟೋ ಚಾಲಕರ ಯೂನಿಯನ್ ಮಂಗಳೂರು ನಗರ ಸಮಿತಿಯು ದ.ಕ. ಜಿಲ್ಲಾಧಿಕಾರಿ ಮತ್ತು ಸಾರಿಗೆ ಇಲಾಖೆಯ ಅಧಿಕಾರಿಗೆ ಮನವಿ ಸಲ್ಲಿಸಿತು.
ಪರಿಷ್ಕೃತ ಆಟೋ ರಿಕ್ಷಾ ದರ ಅನ್ವಯವಾಗುವಂತೆ ಆಟೋ ರಿಕ್ಷಾ ಮೀಟರ್ ದರವನ್ನು ಸತ್ಯಾಪನೆ ಮಾಡಿ ಸಂಬಂಧಪ್ಪಟ್ಟ ಇಲಾಖೆಯಿಂದ ದೃಢೀಕರಿಸಿ ಮರು ಸಂಗ್ರಹ ಮಾಡುವ ಪ್ರಕ್ರಿಯೆಗೆ ತಾಂತ್ರಿಕ ಡೀಲರ್ಗಳು ಪ್ರತೀ ಆಟೋ ರಿಕ್ಷಾಗಳಿಗೆ 550 ರೂ. ವೆಚ್ಚ ನಿಗದಿ ಪಡಿಸಿದ್ದಾರೆ. ಲಾಕ್ಡೌನ್ನಿಂದ ಕಂಗೆಟ್ಟ ರಿಕ್ಷಾ ಚಾಲಕರಿಗೆ ಈ ವೆಚ್ಚ ಭರಿಸಲು ಅಸಾಧ್ಯವಾಗುತ್ತಿದ್ದು, ಸಾರಿಗೆ ಇಲಾಖೆ ಅಧಿಕಾರಿಗಳು ಮತ್ತು ಜಿಲ್ಲಾಧಿಕಾರಿ ಗಳು ರಿಕ್ಷಾ ಚಾಲಕರ ಸಂಕಷ್ಟವನ್ನು ಅರ್ಥ ಮಾಡಿ ಈ ಪ್ರಕ್ರಿಯೆಗೆ ಕನಿಷ್ಠ ದರ ನಿಗದಿಪಡಿಸಲು ಆದೇಶ ಹೊರಡಿಸಬೇಕು ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಎಸ್ಡಿಟಿಯು ದ.ಕ. ಜಿಲ್ಲಾಧ್ಯಕ್ಷ ಖಾದರ್ ಫರಂಗಿಪೇಟೆ, ಜಿಲ್ಲಾ ಸಮಿತಿ ಸದಸ್ಯ ನೌಫಲ್ ಕುದ್ರೋಳಿ, ನಗರ ಸಮಿತಿಯ ಅಧ್ಯಕ್ಷ ಮಜೀದ್ ಉಳ್ಳಾಲ, ಕಾರ್ಯದರ್ಶಿ ಶರೀಫ್ ಕುತ್ತಾರ್, ಸದಸ್ಯರಾದ ಹರ್ಷದ್ ಕುದ್ರೋಳಿ, ಇಲ್ಯಾಸ್ ಬೆಂಗರೆ ಉಪಸ್ಥಿತರಿದ್ದರು.