ಬೋಗೋಡಿ ಸಲ್ ಸಬೀಲ್ ವಿದ್ಯಾರ್ಥಿಗಳಿಂದ ಪರಿಸರ ದಿನಾಚರಣೆ
ಬಂಟ್ವಾಳ, ಜೂ.5: ಪರಿಸರ ದಿನಾಚರಣೆಯ ಪ್ರಯುಕ್ತ ಸಲ್ ಸಬೀಲ್ ಸ್ಟೂಡೆಂಟ್ಸ್ ಅಸೋಸಿಯೇಶನ್ ವತಿಯಿಂದ ಪಾಣೆಮಂಗಳೂರು ಆಸುಪಾಸಿನಲ್ಲಿ ಗಿಡ ನೆಡುವ ಕಾರ್ಯಕ್ರಮ ಶುಕ್ರವಾರ ಬೆಳಗ್ಗೆ ನಡೆಯಿತು.
ಈ ಸಂದರ್ಭದಲ್ಲಿ ಸ್ಥಳೀಯ ಕೌನ್ಸಿಲರ್ ಅಬೂಬಕರ್ ಸಿದ್ದೀಕ್ ಗುಡ್ಡೆಅಂಗಡಿ, ಸಂಸ್ಥೆಯ ಅಧ್ಯಕ್ಷ ಉಮರ್ ಸಾಬಿತ್ ಬೋಗೋಡಿ, ಸದಸ್ಯರಾದ ರಾಫಿದ್ ಬೋಗೋಡಿ, ನಜೀಬ್ ಬೋಗೋಡಿ, ಜಮಾಲ್ ಆಲಡ್ಕ, ಉಬೈದ್, ಜಾಫರ್, ರಿಫಾತ್, ರಾಶಿದ್, ಆಬಿದ್, ಕೈಫ್, ಅಸ್ಫಾಕ್, ಮುಸ್ತಫ, ಸುಹೈಲ್ ಮೊದಲಾದವರು ಉಪಸ್ಥಿತರಿದ್ದರು.