ವಿಧಾನಸಭೆ ಸ್ಪೀಕರ್ ರಾಜೀನಾಮೆಗೆ ಕರ್ನಾಟಕ ರಾಷ್ಟ್ರ ಸಮಿತಿ ಒತ್ತಾಯ | Vartha Bharati- ವಾರ್ತಾ ಭಾರತಿ

ವಿಧಾನಸಭೆ ಸ್ಪೀಕರ್ ರಾಜೀನಾಮೆಗೆ ಕರ್ನಾಟಕ ರಾಷ್ಟ್ರ ಸಮಿತಿ ಒತ್ತಾಯ

ಮಂಗಳೂರು, ಜೂ. 6: ಸಾರ್ವಜನಿಕ ಲೆಕ್ಕಪತ್ರ ಸಮಿತಿ(ಪಿಎಸಿ)ಯ ಕರ್ತವ್ಯ ನಿರ್ವಹಣೆಗೆ ಸ್ಪೀಕರ್ ವಿಶ್ವೇಶ್ವರ ಹೆಗಡೆಯವರು ಸಂವಿಧಾನ ಬಾಹಿರ ತಡೆಯಾಜ್ಞೆ ನೀಡಿದ್ದು, ಅವರು ರಾಜೀನಾಮೆ ನೀಡಬೇಕು ಎಂದು ರ್ನಾಟಕ ರಾಷ್ಟ್ರ ಸಮಿತಿ ಒತ್ತಾಯಿಸಿದೆ.

ಸುದ್ದಿಗೋಷ್ಠಿಯಲ್ಲಿಂದು ಈ ಒತ್ತಾಯ ಮಾಡಿದ ಸಮಿತಿಯ ರಾಜ್ಯ ಘಟಕದ ಉಪಾಧ್ಯಕ್ಷ ಪಿ. ಅಮೃತ್ ಶೆಣೈ, ಸ್ಪೀಕರ್ ವಿರುದ್ಧ ಹಕ್ಕುಚ್ಯುತಿ ಮಂಡಿಸಲಿರುವ ಎಚ್.ಕೆ. ಪಾಟೀಲ್ ಮತ್ತು ಪಿಎಸಿ ಸಮಿತಿಗೆ ಬೆಂಬಲ ನೀಡುವುದಾಗಿ ಅವರು ಹೇಳಿದರು.

ಕೊರೋನ ಸೋಂಕು ತಡೆಯಲು ಅಗತ್ಯವಾದ ಔಷಧ ಹಾಗೂ ವೈದ್ಯಕೀಯ ಉಪಕರಣಗಳ ಖರೀದಿಯಲ್ಲಿ ನಡೆದಿರುವ ಅಕ್ರಮಗಳ ಕುರಿತು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ ಕಳೆದ ಎರಡು ತಿಂಗಳಿಂದ ಸಾಮಾಜಿ ಮಾಧ್ಯಮ ಸೇರಿದಂತೆ ಹಲವೆಡೆ ಧ್ವನಿ ಎತ್ತಿದೆ. ರಾಜ್ಯ ಸರಕಾರದ ಕೆಡಿಎಲ್‌ಡಬ್ಲುಎಸ್ ಸಂಸ್ಥೆಯು ವಿಪತ್ತಿನ ಸಂದರ್ಭ ದುರುಪಯೋಗಪಡಿಸಿಕೊಂಡು ಅಕ್ರಮಗಳನ್ನು ಎಸಗಿದ್ದು, ಇದರಿಂದ ಸರಕಾರಕ್ಕೆ ಕೋಟ್ಯಂತರ ರೂ. ನಷ್ಟ ಉಂಟಾಗಿದೆ. ವೈದ್ಯಕೀಯ ಉಪಕರಣಗಳ ಉತ್ಪಾದಕರಿಂದ ಖರೀದಿಸಬೇಕಿದ್ದ ಸಾಮಗ್ರಿಗಳನ್ನು ಗಳನ್ನು ಕೆಡಿಎಲ್‌ಡಬ್ಲುಎಸ್ ಸಂಸ್ಥೆಯು ಕೃಷಿ ಉತ್ಪನ್ನಗಳ ತಯಾರಿಕಾ ಕಂಪನಿ, ವೆಬ್‌ಸೈಟ್ ಡಿಸೈನ್ ಮಾಡುವಂತಹ ಸಂಶಯಾಸ್ಪದ ಕಂಪನಿಗಳಿಂದ 3 ಕೋಟಿ ರೂ.ಗಳ ಪಿಪಿಇ ಕಿಟ್‌ಗಳನ್ನು ಖರೀದಿಸಿದೆ. ಕೊರೋನ ಸೋಂಕಿನ ಚಿಕಿತ್ಸೆಗೆ ಅಗತ್ಯವಾದ ವೆಂಟಿಲೇಟರ್‌ಗಳನು ದೆಹಲಿ ಸಂಸ್ಥೆಯೊಂದರಿಂದ 3.88 ಕೋಟಿ ರೂ. ಪಾವತಿಸಿ ಖರೀದಿ ಮಾಡಲಾಗಿದೆ. 2007ರಲ್ಲಿಯೇ ಆ ಸಂಸ್ಥೆಯು ಇವುಗಳನ್ನು ಖರೀದಿಸಿದ್ದು, ಈಗಾಗಲೇ 45,000 ಗಂಟೆಗಳ ಕಾಲ ಅವುಗಳನ್ನು ಬಳಸಿದೆ. ವೆಂಟಿಲೇಟರ್‌ಗಳು 8 ವರ್ಷ ಮಾತ್ರ ಬಾಳಿಕೆ ಬರಲಿದ್ದು, ಇಲ್ಲಿ 13 ವರ್ಷ ಹಳೆಯದಾದ ಈ ವೆಂಟಿಲೇಟರ್‌ಗಳನ್ನು ಹೊಸ ಉಪಕರಣಗಳ ಬೆಲೆಗೆ ಖರೀದಿ ಮಾಡಲಾಗಿದೆ. ದಾಸ್ತಾನು ಪಡೆಯುವುದಕ್ಕೆ ಮುನ್ನ ಐಎಸ್‌ಒ ಅಥವಾ ಯಾವುದೇ ದೃಢೀಕರಣವನ್ನು ಪೆದಿಲ್ಲ ಎಂದು ಅವರು ಆರೋಪಿಸಿದರು.

2019ರಲ್ಲಿ ಟೆಂಡರ್ ಮೂಲಕ ಸ್ಯಾನಿಟೈಸರ್ ಖರೀದಿ ಪ್ರಕ್ರಿಯೆ ನಡೆಸಿದ್ದ ಕೆಡಿಎಲ್‌ಡಬ್ಲುಎಸ್ ಸಂಸ್ಥೆಯು 500 ಎಂಎಲ್ ಬಾಟಲಿಗಳಲ್ಲಿ 47 ಸಾವಿರ ಯುನಿಟ್‌ಗಳನ್ನು ಪೂರೈಸುವ ಕಾರ್ಯಾದೇಶವನ್ನು ಎಂ.ಎಸ್ ಫಾರ್ಮಸುಟಿಕಲ್‌ಗೆ ನೀಡಿತ್ತು. ಆಗ ಪ್ರತಿ ಬಾಟಲ್‌ಗೆ 97.44 ರೂ. ದರ ನೀಡಲಾಗಿತ್ತು. ಬೇಡಿಕೆಯಲ್ಲಿ ಶೇ. 50ರಷ್ಟು ಸ್ಯಾನಿಟೈಸರ್ ಮಾತ್ರ ಪೂರೈಸಿದ್ದ ಚೆನ್ನೈನ ಆ ಕಂಪನಿ ಬಾಕಿ ಉತ್ಪನ್ನ ಪೂರೈಕೆ ಮಾಡುವುದಿಲ್ಲ ಎಂದು ತಿಳಿಸಿತ್ತು. ಟೆಂಡರ್ ನಿಯಮವನ್ನು ಉಲ್ಲಂಘಿಸಿದ ಕಂಪನಿ ವಿರುದ್ಧ ಕ್ರಮ ಕೈಗೊಂಡು ಭದ್ರತಾ ಠೇವಣಿ ಮುಟ್ಟುಗೋಲು ಹಾಕುವ ಬದಲು ಅದೇ ಕಂಪನಿಯಿಂದ ಇತ್ತೀಚೆಗೆ 350 ರೂ. ದರದಲ್ಲಿ ಕೋಟ್ಯಂತರ ರೂ.ಗಳ ಸ್ಯಾನಿಟೈಸರ್ ಖರೀದಿಸಲಾಗಿದೆ. ಕೇರಳ, ಒಡಿಶ್ಶಾ ಸೇರಿದಂತೆ ಇತರ ರಾಜ್ಯಗಳಲ್ಲಿ ರಾಜ್ಯಗಳ ಆರೋಗ್ಯ ಇಲಾಖೆಗಳು ಕಪ್ಪು ಪಟ್ಟಿಗೆ ಸೇರಿಸಿದ್ದ ಮತ್ತು ಈ ಹಿಂದೆ ನಮ್ಮ ರಾಜ್ಯ ಸರಕಾರಕ್ಕೆ ಕಳಪೆ ಔಷಧಿ ಮಾರಿದಕ್ಕಾಗಿ ಶೋಕಾಸ್ ನೋಟೀಸು ಪಡೆದಿದ್ದ ಗುಜರಾತ್ ಮೂಲದ ಆಕ್ಯುಲೈಫ್ ಕಂಪನಿಯಿಂದ ಗ್ಲೂಕೋಸ್ ಖರೀದಿ ಮಾಡಲಾಗಿದೆ. 2015-16ರಲ್ಲಿ ಸುಮಾರು 2 ಕೋಟಿ ರೂ.ಗಳಿಗೂ ಅಧಿಕ ದರಕ್ಕೆ ಖರೀದಿಸಿದ್ದ ಡಯಾಲಿಸ್ ಉಪಕರಣಗಳನ್ನು ಈಗ 24 ಲಕ್ಷ ರೂ.ಗಳಿಗೆ ಕೆಡಿಎಲ್‌ಡಬ್ಲುಎಸ್ ಮಾರಾಟ ಮಾಡಿದೆ. ಇದಲ್ಲದೆ ಇನ್ನಷ್ಟು ಅಕ್ರಮಗಳ ಕುರಿತು ನಮ್ಮಲ್ಲಿ ದಾಖಲೆ ಇದೆ ಎಂದು ಅವರು ಹೇಳಿದರು.

ಈ ಎಲ್ಲಾ ಅಕ್ರಮಗಳ ವಿರುದ್ಧ ಪಕ್ಷದ ವತಿಯಿಂದ ರಾಜ್ಯ ಭ್ರಷ್ಟಾಚಾರ ನಿಗ್ರಹ ದಳದಲ್ಲಿಯೂ ಕಳೆದ ಮೇ 12ರಂದು ದೂರು ದಾಖಲಿಸಲಾಗಿದೆ. ಶಾಸಕ ಎಚ್.ಕೆ. ಪಾಟೀಲರ ಅಧ್ಯಕ್ಷತೆಯ ಸಾರ್ವಜನಿಕ ಲೆಕ್ಕಪತ್ರ ಸಮಿತಿಗೂ ಲಿಖಿತ ದೂರು ನೀಡಲಾಗಿದೆ. ನಮ್ಮ ದೂರು ಮತ್ತು ಇತರ ದೂರು ಮಾಹಿತಿಗಳ ಆಧಾರದ ಮೇಲೆ ಪಿಎಸಿಯ ಕೆಲವು ಅಧಿಕಾರಿಗಳಿಗೆ ನೋಟೀಸು ಜಾರಿ ಮಾಡಿರುವುದು ಮತ್ತು ಖುದ್ದು ಕಚೇರಿಗಳಿಗೆ ಹೋಗಿ ಕಡತ ಪರಿಶೀಲನೆ ಮಾಡಲಿರುವ ಕುರಿತು ವರದಿಯಾಗಿತ್ತು. ಆದರೆ ಸಮಿತಿಯ ಪರಿಶೀಲನೆಗೆ ನಿಗದಿಗೊಳಿಸಿದ್ದ ಉದ್ದೇಶಿತ ಭೇಟಿಗೆ ಒಂದು ದಿನ ಮುಂಚಿತವಾಗಿ ರಾಜ್ಯ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿಯವರು ಸಮಿತಿಯ ಕೆಲಸಕ್ಕೆ ತಡೆಯಾಜ್ಞೆ ಜಾರಿಗೊಳಿಸಿದ್ದಾರೆ. ಸಾರ್ವಜನಿಕ ಲೆಕ್ಕಪತ್ರ ಸಮಿತಿಗೆ ತನ್ನದೇ ಆದ ಅಧಿಕಾರ ವ್ಯಾಪ್ತಿ ಇದೆ. ಕೇಂದ್ರ ಮತ್ತು ಹಲವು ರಾಜ್ಯ ಸರಕಾರಗಳಲ್ಲಿಯ ಸಾರ್ವಜನಿಕ ಹಣದ ದುರುಪಯೋಗದಂತಹ ಗಂಭೀರ ಪ್ರಕರಣಗಳನ್ನು ಪಿಎಸಿ ಸಮಿತಿ ಬಯಲಿಗೆಳೆದಿದೆ. ಇವುಗಳಲ್ಲಿ ಪ್ರಮುಖವಾಗಿ ಕೇಂದ್ರದಲ್ಲಿ ಯುಪಿಎ ಅಧಿಕಾರದಲ್ಲಿದ್ದ ಅವಧಿಯಲ್ಲಿ ನಡೆದಿದೆ ಎನ್ನಲಾದ ಕಲ್ಲಿದ್ದಲು ಹಗರಣ, 2ಜಿ ಸ್ಪ್ರೆಕ್ಟ್ರಂ ಹಗರಣವೂ ಸೇರಿದೆ. ಇಂತಹ ಸಮಿತಿಯ ಕೆಲಸಕ್ಕೆ ತಡೆಯಾಜ್ಞೆ ಸಂವಿಧಾನ ಬಾಹಿರ. ರಾಜ್ಯ ಸರಕಾರದ ಭ್ರಷ್ಟಾಚಾರ ಮತ್ತು ಅಕ್ರಗಳನ್ನು ಮುಚ್ಚಿ ಹಾಕಲು ಸಾಂವಿಧಾನಿಕ ಸಂಸ್ಥೆಯೊಂದರ ಅಸ್ತಿತ್ವವನ್ನು ನಾಶ ಮಾಡಲು ಸಭಾಧ್ಯಕ್ಷರು ಮುಂದಾಗಿದ್ದಾರೆ ಎಂದು ಅವರು ಆರೋಪಿಸಿದರು.

ಹಗರಣಕ್ಕೆ ಸಂಬಂಧಿಸಿದ ಎಲ್ಲಾ ಕಡತಗಳನ್ನು ರಾಜ್ಯ ಮುಖ್ಯ ಕಾರ್ಯದರ್ಶಿಯ ಸುಪರ್ದಿಯಲ್ಲಿಡಬೇಕು. ಎಲ್ಲಾ ಕಡತಗಳನ್ನು, ಟಿಪ್ಪಣಿ ಹಾಳೆ, ದಾಖಲೆ, ಪತ್ರ ವ್ಯವಹಾರಗಳಲ್ಲಿ ಶೀಘ್ರದಲ್ಲಿಯೇ ಆಯಾಯ ಇಲಾಖೆಗಳ ಅಧಿಕೃತ ವೆಬ್‌ಸೈಟ್‌ನಲ್ಲಿ ಸಂಪೂರ್ಣವಾಗಿ ಪ್ರಕಟಿಸಬೇಕು ಎಂದು ಅವರು ಒತ್ತಾಯಿಸಿದರು.

ಗೋಷ್ಠಿಯಲ್ಲಿ ಸಮಿತಿಯ ಜಿಲ್ಲಾ ಘಟಕದ ಅಧ್ಯಕ್ಷ ಅಲೆಕ್ಸಾಂಡರ್ ಡಿಸೋಜಾ, ದೇವಿಪ್ರಸಾ್ ಬಜಿಲಕೇರಿ, ಹ್ಯಾರಿ ಉಪಸ್ಥಿತರಿದ್ದರು.

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top