ಉಡುಪಿ: ಸ್ವಚ್ಛ ಗ್ರಾಮ- ಸ್ವಚ್ಛ ಪರಿಸರ ಸ್ಪರ್ಧೆ
ಉಡುಪಿ, ಜೂ.6: ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಸ್ವಚ್ಛ ಗ್ರಾಮ -ಸ್ವಚ್ಛ ಪರಿಸರ ಸ್ಪರ್ಧೆಯನ್ನು ಆಯೋಜಿಸಲಾಗಿದ್ದು, ಸಾಂಸ್ಥಿಕ ಮತ್ತು ಗೃಹೋತ್ಪಾದಿತ ತ್ಯಾಜ್ಯ ನೀರಿನ ಸೂಕ್ತ ವಿಲೇವಾರಿ ಕುರಿತಂತೆ ಕಿರುಚಿತ್ರ, ಯಶೋಗಾಥೆ ಮಾದರಿ ಇವುಗಳಲ್ಲಿ ಯಾವುದಾದರೂ ಒಂದನ್ನು ಕಳುಹಿಸಿ ಬಹುಮಾನ ಗೆಲ್ಲಬಹುದಾಗಿದೆ. ದ್ರವ ತ್ಯಾಜ್ಯ ವಿಲೇವಾರಿ, ಕನಿಷ್ಠ ಯಾಂತ್ರಿಕ ಬಳಕೆ, ಕಡಿಮೆ ವೆಚ್ಚ, ಸರಳ ಹಾಗೂ ಗ್ರಾಮೀಣ ಸ್ನೇಹಿ ಅಂಶಗಳನ್ನು ಒಳಗೊಂಡಿರಬೇಕು.
ಸ್ಪರ್ಧೆಗೆ ಮಾದರಿಗಳನ್ನು ಸಲ್ಲಿಸಲು ಜೂ.19 ಕೊನೆಯ ದಿನವಾಗಿದೆ. ಹೆಚ್ಚಿನ ಮಾಹಿತಿಗಾಗಿ ಜಿಪಂ ಕಚೇರಿ ಅಥವಾ ಜಿಪಂ ಫೇಸ್ಬುಕ್ ಪೇಜ್ ಪುಟಕ್ಕೆ ಭೇಟಿ ನೀಡಬಹುದು ಅಥವಾ ದೂ.ಸಂ. 0820-2574945ನ್ನು ಸಂಪರ್ಕಿ ಸುವಂತೆ ಜಿಪಂ ಮುಖ್ಯ ಕಾರ್ಯ ನಿರ್ವಹಾಣಧಿಕಾರಿ ಪ್ರೀತಿ ಗೆಹ್ಲೋಟ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Next Story