ಉದ್ಯಮಿ, ಸಾಮಾಜಿಕ ಧುರೀಣ ಹಾಜಿ ಪಿ.ಕೆ. ಅಬೂಸಾಲಿಹ್ ನಿಧನ
ಪಡುಬಿದ್ರೆ : ಉದ್ಯಮಿ, ಸಾಮಾಜಿಕ ಧುರೀಣ ನಡ್ಸಾಲು ಗ್ರಾಮದ ಕನ್ನಂಗಾರಿನ ಪಂಬತೋಟ ಹೌಸ್ ನಿವಾಸಿ ಹಾಜಿ ಪಿ.ಕೆ. ಅಬೂಸಾಲಿಹ್ (89) ಅಲ್ಪಕಾಲದ ಅಸೌಖ್ಯದಿಂದ ಬುಧವಾರ ನಿಧನ ಹೊಂದಿದರು.
ಎಳೆಯ ವಯಸ್ಸಿನಲ್ಲಿ ಮೂಡಿಗೆರೆ ತಾಲೂಕಿನ ಹ್ಯಾಂಡ್ಪೋಸ್ಟ್ ನಲ್ಲಿ ಗ್ರೀನ್ ಸ್ಟೋರ್ ಎಂಬ ಸಂಸ್ಥೆಯನ್ನು ಆರಂಭಿಸಿ ದಿನಸಿ ಸಾಮಗ್ರಿಗಳ ವ್ಯಾಪಾರ ನಡೆಸುತಿದ್ದರು. ಅಲ್ಲದ ಹ್ಯಾಂಡ್ಪೋಸ್ಟ್ ನಲ್ಲಿ ಕೃಷಿಕರಾಗಿದ್ದ ಇವರು, ಹಿರಿಯ ಮುತ್ಸದ್ಧಿ ಕೊಡುಗೈದಾನಿಯಾಗಿದ್ದರು.
ಪತ್ನಿ, ನಾಲ್ಕು ಮಂದಿ ಪುತ್ರರು, ನಾಲ್ಕು ಪುತ್ರಿಯರು ಹಾಗು ಅಪಾರ ಬಂಧುಬಳಗವನ್ನು ಅಗಲಿದ್ದಾರೆ. ಹ್ಯಾಂಡ್ಫೋಸ್ಟ್ ಜುಮಾ ಮಸೀದಿಯಲ್ಲಿ 40 ವರ್ಷಗಳ ಕಾಲ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ಇವರು. ಮೂಡಿಗೆರೆ ತಾಲೂಕು ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷರಾಗಿ, ಸಾಮಾಜಿಕ ಹಾಗೂ ಧಾರ್ಮಿಕ ಸಂಘಟನೆಗಳಲ್ಲಿ ಸಕ್ರಿಯರಾಗಿ ತೊಡಗಿಸಿಕೊಂಡಿದ್ದರು.
Next Story