ವಿಶ್ವ ರಕ್ತದಾನಿಗಳ ದಿನ : ಐಎಸ್ಎಫ್, ಬಿಡಿಎಂ ವತಿಯಿಂದ ದಮಾಮ್ ನಲ್ಲಿ ರಕ್ತದಾನ ಶಿಬಿರ
ದಮಾಮ್ : ಇಂಡಿಯನ್ ಸೋಶಿಯಲ್ ಫೋರಂ, ದಮಾಮ್, ಕರ್ನಾಟಕ ಘಟಕ ಮತ್ತು ಬ್ಲಡ್ ಡೋನರ್ಸ್ ಮಂಗಳೂರು (ಬಿಡಿಎಂ) ಇದರ ಸಹಭಾಗಿತ್ವದೊಂದಿಗೆ ವಿಶ್ವ ರಕ್ತದಾನಿಗಳ ದಿನದ ಪ್ರಯುಕ್ತ ದಮಾಮ್ ನ ಕಿಂಗ್ ಫಹಾದ್ ಆಸ್ಪತ್ರೆಯಲ್ಲಿ ರವಿವಾರ ರಕ್ತದಾನ ಶಿಬಿರ ನಡೆಯಿತು.
ಐಎಸ್ಎಫ಼್ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಇರ್ಶಾದ್ ಮತ್ತು ಬಿಡಿಎಂ ಅಧ್ಯಕ್ಷ ಫರ್ಝಾನ್ ಅಹ್ಮದ್ ರಕ್ತದಾನ ಮಾಡುವುದರೊಂದಿಗೆ ಶಿಬಿರವನ್ನು ಉದ್ಘಾಟಿಸಿದರು.
ಶಿಬಿರದಲ್ಲಿ ಪಾಲ್ಗೊಂಡ ದಾನಿಗಳು ಸುಮಾರು 141 ಯುನಿಟ್ ರಕ್ತದಾನ ಮಾಡಿದರು.
Next Story