ಮನೆಗೆ ನುಗ್ಗಿ ಚಿನ್ನಾಭರಣ ಕಳವು
ಹಿರಿಯಡ್ಕ, ಜೂ.19: ಪೆರ್ಡೂರು ಎಡ್ಮಡ್ಕ ಎಂಬಲ್ಲಿ ಮನೆಯೊಂದಕ್ಕೆ ನುಗ್ಗಿದ ಕಳ್ಳರು ಲಕ್ಷಾಂತರ ರೂ. ವೌಲ್ಯದ ಚಿನ್ನಾಭರಣಗಳನ್ನು ಕಳವು ಮಾಡಿರುವ ಘಟನೆ ಜೂ.18ರಂದು ಮಧ್ಯಾಹ್ನ ನಡೆದಿದೆ.
ಸುಧಾಕರ ನಾಯ್ಕ ಎಂಬವರ ಮನೆಯ ಬಾಗಿಲಿನ ಚಿಲಕ ತೆಗೆದು ಒಳ ನುಗ್ಗಿದ ಕಳ್ಳರು, ಕಾಪಾಟಿನಲ್ಲಿದ್ದ ಕನಕಮಾಲೆ ಸರ, ಪೆಂಡೆಂಟ್ ಸರ, ಮೆಂತೆ ಸರ, 6 ಉಂಗುರಗಳು, 2 ಕಿವಿಯ ಓಲೆಗಳು, ಸರ, ಕಿವಿಯ ಸರ ಸೇರಿದಂತೆ ಒಟ್ಟು 114 ಗ್ರಾಂ ತೂಕದ ಚಿನ್ನಾಭರಣಗಳನ್ನು ಕಳವು ಮಾಡಿದ್ದಾರೆ. ಇವುಗಳ ಮೌಲ್ಯ 2ಲಕ್ಷ ರೂ. ಎಂದು ಅಂದಾಜಿಸಲಾಗಿದೆ.
ಈ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story