ಕೆಎಸ್ಸಾರ್ಟಿಸಿ: ಮಾಸಿಕ ಬಸ್ಪಾಸ್ ಲಭ್ಯ
ಮಂಗಳೂರು, ಜೂ.20: ರಾಜ್ಯ ರಸ್ತೆ ಸಾರಿಗೆ ನಿಗಮದ ಸೇವೆಗಳಯಲ್ಲಿ ಕೆಲವು ಬದಲಾವಣೆ ಮಾಡಿಕೊಂಡು ಅವಶ್ಯಕತೆಗನುಸಾರ ಸಾರಿಗೆ ಕಾರ್ಯಾಚರಣೆ ಆರಂಭಿಸಲಾಗಿದ್ದು, ಸದ್ಯ ಮಾಸಿಕ ಪಾಸ್ ವಿತರಣೆಗೆ ಸಿದ್ಧತೆ ನಡೆದಿದೆ.
ನಿಗಮದ ಸಾಮಾನ್ಯ, ವೇಗದೂತ ಹಾಗೂ ನಗರ ಸಾರಿಗೆಗಳಲ್ಲಿ ಪ್ರತಿನಿತ್ಯ ಪ್ರಯಾಣಿಸುವ ಪ್ರಯಾಣಿಕರ ಅನುಕೂಲಕ್ಕಾಗಿ ಮಾಸಿಕ ಬಸ್ಪಾಸ್ ಸೌಲಭ್ಯವಿದೆ. ಮಂಗಳೂರು/ಸ್ಟೇಟ್ಬ್ಯಾಂಕ್-ಧರ್ಮಸ್ಥಳ, ಮಂಗಳೂರು/ಸ್ಟೇಟ್ಬ್ಯಾಂಕ್- ಉಪ್ಪಿನಂಗಡಿ, ಮಂಗಳೂರು/ಸ್ಟೇಟ್ಬ್ಯಾಂಕ್-ಸುಬ್ರಹ್ಮಣ್ಯ, ಮಂಗಳೂರು/ಸ್ಟೇಟ್ಬ್ಯಾಂಕ್- ಬಿ.ಸಿ.ರೋಡ್, ಮಂಗಳೂರು/ ಸ್ಟೇಟ್ಬ್ಯಾಂಕ್ - ಉಡುಪಿ, ಮಾರ್ಗಗಳಲ್ಲಿ ಮಾಸಿಕ ಪಾಸ್ಗಳನ್ನು ಜೂ.20ರಿಂದಲೇ ವಿತರಿಸಲಾಗುತ್ತಿದೆ.
ಹೆಚ್ಚಿನ ಮಾಹಿತಿಗಾಗಿ ಮಂಗಳೂರು ಬಸ್ನಿಲ್ದಾಣ (7760990720), ಸ್ಟೇಟ್ಬ್ಯಾಂಕ್ ಬಸ್ ನಿಲ್ದಾಣ (9663266001), ಉಡುಪಿ ಬಸ್ನಿಲ್ದಾಣ (9663266400), ಕುಂದಾಪುರ ಬಸ್ ನಿಲ್ದಾಣವನ್ನು (9663266009) ಸಂಪರ್ಕಿಸಲು ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಮಂಗಳೂರು ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.