ಬಜ್ಪೆ : ನವೀಕೃತ ಮಾರುಕಟ್ಟೆ ಪುನರಾರಂಭ
ಬಜ್ಪೆ, ಜೂ.23: ಕೊರೊನಾ ವೈರಸ್ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಬಜ್ಪೆಗ್ರಾಪಂ ಆಡಳಿತವು ಎ.3ರಂದು ಬಜ್ಪೆದಿನವಹಿ ಹಣ್ಣು ಮತ್ತು ತರಕಾರಿ ಮಾರುಕಟ್ಟೆಯನ್ನು ತಾತ್ಕಾಲಿಕ ನೆಲೆಯಲ್ಲಿ ಕೇಂದ್ರ ಮೈದಾನಕ್ಕೆ ಸ್ಥಳಾಂತರಿಸಿದ್ದು, ಸೋಮವಾರದಿಂದ ನವೀಕೃತ ಮಾರುಕಟ್ಟೆಯಲ್ಲಿ ವಹಿವಾಟು ಪುನರಾರಂಭಗೊಂಡಿದೆ.
ತರಕಾರಿ ಮತ್ತು ಹಣ್ಣು ವ್ಯಾಪಾರದ ಹಳೆಯ ಮಾರುಕಟ್ಟೆ ವ್ಯವಸ್ಥಿತವಾಗಿರಲಿಲ್ಲ ಮತ್ತು ವ್ಯಾಪಾರಿಗಳು ಮತ್ತು ಗ್ರಾಹಕರಿಗೆ ಹೆಚ್ಚಿನ ಅನುಕೂಲ ಗಳಿರಲಿಲ್ಲ. ಈ ಅಂಶವನ್ನು ಮನಗಂಡ ಬಜ್ಪೆಗ್ರಾಪಂ ಆಡಳಿತವು ಹಳೆ ಮಾರುಕಟ್ಟೆ ಪ್ರಾಂಗಣ ನವೀಕರಿಸಿತ್ತಲ್ಲದೆ ವಿದ್ಯುತ್ ಸಂಪರ್ಕ, ಸೀಸಿ ಕ್ಯಾಮರಾ, ಸುರಕ್ಷಿತ ಅಂತರಕ್ಕೆ ಗೆರೆ, ಮಳೆ ನೀರು ಸರಾಗವಾಗಿ ಹರಿದು ಹೋಗಲು ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಪಿಡಿಒ ಸಾಯೀಸ್ ಚೌಟ ತಿಳಿಸಿದರು.
Next Story