ಕಾಪು: ಕಳತ್ತೂರಿನ ಒಂದು ವರ್ಷದ ಮಗುವಿಗೆ ಕೊರೋನ
ಕಾಪು, ಜೂ.30: ತಾಯಿಯೊಂದಿಗೆ ವಿದೇಶದಿಂದ ಬಂದಿದ್ದ ಕಳತ್ತೂರಿನ ಒಂದು ವರ್ಷದ ಮಗುವಿಗೆ ಇಂದು ಕೊರೋನ ಸೊಂಕು ಇರುವುದು ಇಂದು ದೃಢಪಟ್ಟಿದೆ.
ಮೂರು ದಿನಗಳ ಹಿಂದೆ ಮಗು, ತನ್ನ ತಾಯಿ ಮತ್ತು ಸಹೋದರನ ಜೊತೆ ಅಬುಧಾಬಿಯಿಂದ ಉಡುಪಿಗೆ ಆಗಮಿಸಿದ್ದರು. ಒಂದು ವರ್ಷದ ಮಗು ಇದ್ದ ಕಾರಣ ಇವರನ್ನು ಸಾಂಸ್ಥಿಕ ಕ್ವಾರಂಟೇನ್ಗೆ ಒಳಪಡಿಸದೆ ಮನೆಗೆ ಕಳುಹಿಸ ಲಾಗಿತ್ತು. ಇಂದು ಬಂದ ವರದಿಯಲ್ಲಿ ಮಗುವಿಗೆ ಮಾತ್ರ ಪಾಸಿಟಿವ್ ಬಂದು, ತಾಯಿ ಮತ್ತು ಸಹೋದರನಿಗೆ ನೆಗೆಟಿವ್ ಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Next Story