BREAKING NEWS: ಮಂಗಳೂರು: ಶಾಸಕ ಡಾ.ಭರತ್ ಶೆಟ್ಟಿಯವರಿಗೆ ಕೊರೋನ ಪಾಸಿಟಿವ್
ಟ್ವೀಟ್ ಮಾಡಿ ಮಾಹಿತಿ ನೀಡಿದ ಶಾಸಕ
ಮಂಗಳೂರು: ಮಂಗಳೂರು ಉತ್ತರ ಶಾಸಕ ಡಾ.ಭರತ್ ಶೆಟ್ಟಿಯವರಿಗೆ ಕೊರೋನ ಪಾಸಿಟಿವ್ ಆಗಿರುವುದು ದೃಢಪಟ್ಟಿದೆ. ಈ ಬಗ್ಗೆ ಸ್ವತಃ ಭರತ್ ಶೆಟ್ಟಿಯವರು ಟ್ವೀಟ್ ಮಾಡಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, “ನನಗೆ ಕೋವಿಡ್ 19 ಪಾಸಿಟಿವ್ ಆಗಿದೆ. ನಿಮ್ಮೆಲ್ಲರ ಆಶೀರ್ವಾದದಿಂದ ನಾನು ಚೇತರಿಸುತ್ತಿದ್ದೇನೆ. ಕೆಲ ದಿನಗಳ ಕಾಲ ಚಿಕಿತ್ಸೆ ಪಡೆಯಲಿದ್ದೇನೆ.
ದಯವಿಟ್ಟು ಪ್ರತಿಯೊಬ್ಬರು ಸುರಕ್ಷಿತ ಅಂತರ ಕಾಯ್ದುಕೊಳ್ಳಿ, ಮಾಸ್ಕ್ ಧರಿಸಿ ಮತ್ತು ಕೈಗಳನ್ನು ತೊಳೆದುಕೊಳ್ಳಿ. ದಯವಿಟ್ಟು ನಿಮ್ಮ ಮತ್ತು ನಿಮ್ಮ ಹತ್ತಿರದವರ ಬಗ್ಗೆ ಕಾಳಜಿ ವಹಿಸಿ” ಎಂದಿದ್ದಾರೆ.
I have been tested COVID19 positive.
— Dr Bharath Shetty (@bharathshetty_y) July 2, 2020
With all your blessings, I'm recovering & will be under treatment for few days.
Requesting everyone to please maintain social distancing, wear mask while going out and wash hands frequently.
Please take care of yourselves & your near one's.
Next Story