ಮಂಗಳೂರು: ಖಾಸಗಿ ಆಸ್ಪತ್ರೆಯಲ್ಲಿ ಬೆಂಕಿ ಅವಘಡ; ರೋಗಿಗಳ ಸ್ಥಳಾಂತರ
ಮಂಗಳೂರು: ನಗರದ ಕದ್ರಿ ಬಳಿಯ ಖಾಸಗಿ ಆಸ್ಪತ್ರೆಯಲ್ಲಿ ರವಿವಾರ ಬೆಂಕಿ ಅವಘಡ ಸಂಭವಿಸಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ರೋಗಿಗಳನ್ನು ಕೂಡಲೇ ಮತ್ತೊಂದು ಕಡೆಗೆ ಸ್ಥಳಾಂತರಿಸಲಾಗಿದೆ.
ಆಸ್ಪತ್ರೆಯ ಎಂಆರ್ ಐ ಸ್ಕ್ಯಾನಿಂಗ್ ಕೊಠಡಿ ಬಳಿ ಶಾರ್ಟ್ ಸರ್ಕ್ಯೂಟ್ ಆಗಿ ಹತ್ತಿರದ ಬ್ಯಾಟರಿಗೆ ಬೆಂಕಿ ತಗುಲಿದೆ. ಕಟ್ಟಡದ ಕೆಳ ಅಂತಸ್ತಿನ ಮಾಳಿ ತುಂಬಾ ಹೊಗೆ ಆವರಿಸಿತ್ತು.
ಆಸ್ಪತ್ರೆಯ ಮೇಲಿನ ಅಂತಸ್ತಿನಲ್ಲಿದ್ದ ಸುಮಾರು 20 ರೋಗಿಗಳನ್ನು ಆಸ್ಪತ್ರೆಯ ಇನ್ನೊಂದು ಕಟ್ಟಡಕ್ಕೆ ಸ್ಥಳಾಂತರಿಸಲಾಯಿತು. ಸ್ಥಳಕ್ಕೆ ಪಾಂಡೇಶ್ವರ ಹಾಗೂ ಕದ್ರಿ ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸಿದರು.
Next Story