ಭಟ್ಕಳ: ಇಂದು 13 ಮಂದಿಗೆ ಕೊರೋನ ಸೋಂಕು ದೃಢ
ಭಟ್ಕಳ: ಭಟ್ಕಳ ತಾಲೂಕಿನಲ್ಲಿ ಬುಧವಾರ 13 ಹೊಸ ಕೊರೋನ ಪಾಸೊಟಿವ್ ಪ್ರಕರಣಗಳು ಪತ್ತೆಯಾಗುವುದರೊಂದಿಗೆ ಇದುವರೆಗೂ 208 ಪ್ರಕರಣಗಳು ತಾಲೂಕಿನಲ್ಲಿ ದೃಢಪಟ್ಟಂತಾಗಿದೆ. ಇದರಲ್ಲಿ 58 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದರೆ, 149 ಸಕ್ರಿಯ ಪ್ರಕರಣಗಳಿವೆ.
‘ಕೊರೋನಾ ವಾರಿಯರ್’ ಆಗಿ ಕರ್ತವ್ಯ ನಿರ್ವಹಿಸಿದ್ದ ಪೊಲೀಸ್ ಕಾನ್ ಸ್ಟೇಬಲ್ ಒಬ್ಬರ 26 ವರ್ಷದ ಪತ್ನಿ ಹಾಗೂ ಒಂದು ವರ್ಷದ ಗಂಡು ಮಗುವಿಗೂ ಸೋಂಕು ತಗುಲಿದ್ದು ಪೊಲೀಸ್ ಇಲಾಖೆಯಲ್ಲಿ ಆತಂಕವನ್ನುಂಟು ಮಾಡಿದೆ. ಉಳಿದಂತೆ, ಖಾಸಗಿ ಆಸ್ಪತ್ರೆಯ 24 ವರ್ಷದ ಸಿಬ್ಬಂದಿ, 43, 56 ವರ್ಷದ ಮಹಿಳೆಯರು, 24, 25 ವರ್ಷದ ಯುವತಿಯರು, 13, 9, 13 ವರ್ಷದ ಬಾಲಕಿಯರು, 5, 6 ವರ್ಷದ ಬಾಲಕರಿಗೆ ಸೋಂಕು ದೃಢಪಟ್ಟಿದೆ.
ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಮಂಗಳವಾರ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿರುವ 55 ವರ್ಷದ ವ್ಯಕ್ತಿಯೊಬ್ಬರು ಕೋವಿಡ್-19 ಸೋಂಕು ಹಿನ್ನೆಲೆಯಲ್ಲಿ ಮೃತಪಟ್ಟಿರುವುದಾಗಿ ಮಾಹಿತಿ ದೊರಕಿದೆ.
Next Story