ಸಿಬ್ಬಂದಿಗೆ ಕೊರೋನ: ಮಣಿಪಾಲ ಸಿಂಡಿಕೇಟ್ ಬ್ಯಾಂಕ್ ಮುಖ್ಯಕಚೇರಿ ಬಂದ್
ಮಣಿಪಾಲ, ಜು.8: ಸಿಬ್ಬಂದಿಯೊಬ್ಬರಿಗೆ ಕೊರೋನ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಮಣಿಪಾಲದಲ್ಲಿರುವ ಸಿಂಡಿಕೇಟ್ನ ಬ್ಯಾಂಕಿನ ಮುಖ್ಯ ಕಚೇರಿಯನ್ನು ಇಂದು ಬೆಳಗ್ಗೆ ತಾತ್ಕಾಲಿಕವಾಗಿ ಬಂದ್ ಮಾಡಲಾಗಿದೆ.
ಬೆಂಗಳೂರಿನಿಂದ ಮರಳಿರುವ ಸಿಬ್ಬಂದಿಯನ್ನು ಕೊರೋನ ಪರೀಕ್ಷೆಗೆ ಒಳಪಡಿಸಿದ್ದು, ಇಂದು ಈ ವರದಿಯಲ್ಲಿ ಪಾಸಿಟಿವ್ ಎಂಬುದಾಗಿ ಬಂದಿದೆ. ಅದರಂತೆ ಕಂದಾಯ ಅಧಿಕಾರಿಗಳು, ಪೊಲೀಸರು ಬ್ಯಾಂಕಿನ ಮುಖ್ಯ ಕಚೇರಿಯನ್ನು ಎರಡು ದಿನಗಳ ಕಾಲ ಬಂದ್ ಮಾಡಿದ್ದಾರೆ.
ಇಂದು ಕಚೇರಿಯನ್ನು ಒಂದು ಬಾರಿ ಸ್ಯಾನಿಟೈಸ್ ಮಾಡಲಾಗಿದ್ದು, ಮೂರನೆ ದಿನ ಪುನಾರಂಭಿಸುವ ಮೊದಲು ಮತ್ತೊಮ್ಮೆ ಸ್ಯಾನಿಟೈಸ್ ಮಾಡಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.
Next Story