ಡಿಜಿಟಲ್ ಬೆಂಬಲಿತ ಮಾರ್ಗದರ್ಶನ ಕಾರ್ಯಕ್ರಮ: ಅರ್ಜಿ ಆಹ್ವಾನ
ಮಂಗಳೂರು, ಜು.9: ಬುಡಕಟ್ಟು ವ್ಯವಹಾರಗಳ ಸಚಿವಾಲಯವು ಡಿಜಿಟಲ್ ಬೆಂಬಲಿತ ಮಾರ್ಗದರ್ಶನ ಕಾರ್ಯಕ್ರಮ ‘ಗೋಯಲ್’ (ಸ್ವಯಂ ನಾಯಕರಾಗಿ ರೂಪುಗೊಳ್ಳುವುದು) ಪ್ರಾರಂಭಿಸಿದೆ. ಆಸಕ್ತರಿಂದ ಅರ್ಜಿ ಆಹ್ವಾನಿಸಲಾಗಿದೆ.
ದುರ್ಗಮ ಪ್ರದೇಶದಲ್ಲಿರುವ ಪರಿಶಿಷ್ಟ ಪಂಗಡದ ಯುವಕರು ಡಿಜಿಟಲ್ ವಿಶ್ವವನ್ನು ಕರಗತ ಮಾಡಿಕೊಳ್ಳಬಹುದು. ಬಳಿಕ ಅದನ್ನು ಬುಡಕಟ್ಟು ಸಮುದಾಯಕ್ಕೆ ತಲುಪಿಸುವ ಮೂಲಕ ಡಿಜಿಟಲ್ ಭಾರತದ ಧ್ಯೇಯ ಅರ್ಥಮಾಡಿಕೊಂಡು ತಮ್ಮ ಪ್ರತಿಭೆ ಹೆಚ್ಚಿಸಿಕೊಳ್ಳಲು ಸಹಾಯಕವಾಗಲಿದೆ. ಡಿಜಿಟಲ್ ಪ್ಲಾಟ್ಫಾರಂಗಳನ್ನು ಬಳಸಿಕೊಳ್ಳಲು ಅನುವಾಗಿಸುವುದು ಈ ಕಾರ್ಯಕ್ರಮದ ಗುರಿಯಾಗಿದೆ.
ಅರ್ಜಿ ಸ್ವೀಕರಿಸಲು ಜು.14 ಕೊನೆಯ ದಿನ. ಹೆಚ್ಚಿನ ಮಾಹಿತಿಗಾಗಿ goal.tribal.gov.in ಇಲ್ಲಿಗೆ ಅಥವಾ ದೂ.ಸಂ.: 0824- 2451269, 0824- 2450114ನ್ನು ಸಂಪರ್ಕಿಸಲು ಪ್ರಕಟನೆ ತಿಳಿಸಿದೆ.
Next Story