ಬೈಂದೂರು: ಇಲಿ ಪಾಷಾಣ ಸೇವಿಸಿ ಮಹಿಳೆ ಮೃತ್ಯು
ಬೈಂದೂರು, ಜು.10: ಮನೆಯಲ್ಲಿ ಜು.6ರಂದು ಸಂಜೆ ವೇಳೆ ಮದ್ಯ ಎಂದು ಭಾವಿಸಿ ಇಲಿ ಪಾಷಾಣ ಕುಡಿದು ಅಸ್ವಸ್ಥಗೊಂಡಿದ್ದ ತಗ್ಗರ್ಸೆ ಗ್ರಾಮದ ಹೆಗ್ಗೇರಿ ನಿವಾಸಿ ಮಹೇಶ್ ಎಂಬವರ ಪತ್ನಿ ಭಾಗೀರಥಿ(38) ಎಂಬವರು ಜು.9ರಂದು ಬೆಳಗಿನ ಜಾವ ಚಿಕಿತ್ಸೆ ಫಲಕಾರಿಯಾಗದೆ ಮಣಿ ಪಾಲದ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story