ಎಸ್ಸೆಸ್ಸೆಫ್ ಮಲಾರ್ ಶಾಖೆಯ ನೂತನ ಕಚೇರಿ ಉದ್ಘಾಟನೆ
ಕೊಣಾಜೆ, ಜು.14: ಎಸ್ಸೆಸ್ಸೆಫ್ ಬದ್ರಿಯಾ ನಗರ ಮಲಾರ್ ಶಾಖೆಯ ನೂತನ ಕಚೇರಿ ಇತ್ತೀಚೆಗೆ ಉದ್ಘಾಟನೆಗೊಂಡಿತು.
ಮಲಾರ್ ಬದ್ರಿಯಾ ನಗರ ಜುಮಾ ಮಸೀದಿಯ ಖತೀಬ್ ಹನೀಫ್ ಸಅದಿ ದುಆಗೈದು ನೂತನ ಕಚೇರಿಯನ್ನು ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಎಸ್ಸೆಸ್ಸೆಫ್ ಮುಡಿಪು ಡಿವಿಷನ್ ಅಧ್ಯಕ್ಷ ಇಬ್ರಾಹೀಂ ಅಹ್ಸನಿ, ಪ್ರಧಾನ ಕಾರ್ಯದರ್ಶಿ ನೌಫಲ್ ಫರೀದ್ ನಗರ ಮಾತನಾಡಿ ಶುಭ ಹಾರೈಸಿದರು.
ಎಸ್.ವೈ.ಎಸ್. ಬದ್ರಿಯಾ ನಗರ ಅಧ್ಯಕ್ಷ ರಝಾಕ್ ಹಾಜಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಬದ್ರಿಯಾ ನಗರ ಮಸೀದಿ ಅಧ್ಯಕ್ಷ ಇಸ್ಮಾಯೀಲ್ .ಎಸ್.ವೈ.ಎಸ್. ಕಾರ್ಯದರ್ಶಿ ಮಿಫ್ತಾಉ ಸಲಾಂ, ರಹೀಂ ಹಾಜಿ, ಎಂ.ಎ.ಹನೀಫ್, ಹನೀಫ್, ಶಾಖಾ ಅಧ್ಯಕ್ಷ ತಸ್ಲೀಂ, ಕಾರ್ಯದರ್ಶಿ ಇಸ್ಹಾಕ್, ಕೋಶಾಧಿಕಾರಿ ಸಮದ್, ಶಾಖೆಯ ನಿಕಟ ಪೂರ್ವ ಅಧ್ಯಕ್ಷರುಗಳಾದ ಅಝೀಝ್, ರಿಯಾಝ್ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ನೌಫಲ್ ಮರ್ಝೂಖಿ ನಿರೂಪಿಸಿ ವಂದಿಸಿದರು.
Next Story